ವರದಿಗಾರರು :
ದರ್ಶನ್ ಎಂ.ಎನ್, ||
ಸ್ಥಳ :
ದಾವಣಗೆರೆ
ವರದಿ ದಿನಾಂಕ :
28-10-2025
ದಾವಣಗೆರೆಯಲ್ಲಿ ಅಕ್ರಮ ಪಡಿತರ ದಾಸ್ತಾನು ಬಯಲು – 57 ಕ್ವಿಂಟಲ್ ಅಕ್ಕಿ ವಶ!
ದಾವಣಗೆರೆ: ನಗರದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಹಾಗೂ ರಾಗಿ ದಾಸ್ತಾನು ಮಾಡಿದ್ದವರಿಗೆ ಅಧಿಕಾರಿಗಳಿಂದ ಭಾರೀ ಶಾಕ್! ಪಡಿತರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ದಿಢೀರ್ ದಾಳಿ ನಡೆಸಿ ಒಟ್ಟು 57 ಕ್ವಿಂಟಲ್ ಅಕ್ಕಿ ಮತ್ತು 2 ಕ್ವಿಂಟಲ್ ರಾಗಿ ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಯಿತು. ದಾಳಿಯಲ್ಲಿ ಆರ್‌ಎಂಸಿ, ಕೆಟಿಜೆ ನಗರ, ಗಾಂಧಿನಗರ, ಆಜಾದ್ ನಗರ, ಹಾಗೂ ಬಸವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಅಕ್ರಮ ದಾಸ್ತಾನು ಸ್ಥಳಗಳು ಗುರಿಯಾಗಿದವು.
ಆರ್‌ಎಂಸಿ ಠಾಣೆ ವ್ಯಾಪ್ತಿಯಲ್ಲಿ: 12 ಕ್ವಿಂಟಲ್ ಅಕ್ಕಿ
ಕೆಟಿಜೆ ನಗರದಲ್ಲಿ: 9 ಕ್ವಿಂಟಲ್ ಅಕ್ಕಿ, 1.68 ಕ್ವಿಂಟಲ್ ರಾಗಿ
ಗಾಂಧಿನಗರದಲ್ಲಿ: 8 ಕ್ವಿಂಟಲ್ ಅಕ್ಕಿ
ಆಜಾದ್ ನಗರದಲ್ಲಿ: 6 ಕ್ವಿಂಟಲ್ ಅಕ್ಕಿ
ಬಸವನಗರದಲ್ಲಿ: 22 ಕ್ವಿಂಟಲ್ ಅಕ್ಕಿ ಪತ್ತೆ
ಈ ಸಂಬಂಧ ಪ್ರತ್ಯೇಕ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ದಾಳಿಯಲ್ಲಿ ಪಿಎಸ್ಐ ಸಾಗರ ಅತ್ತರವಾಲಾ, ಸಿಬ್ಬಂದಿಗಳಾದ ಮಂಜುನಾಥ, ಪ್ರಕಾಶ, ಗೋವಿಂದರಾಜ್ ಹಾಗೂ ಆಹಾರ ನಿರೀಕ್ಷಕರು ಭಾಗವಹಿಸಿದ್ದರು. ಅವರ ಕಾರ್ಯವನ್ನು ಎಸ್‌ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.
