ವರದಿಗಾರರು :
ಸಿಂಚನ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
26-10-2025
ಶಿವಮೊಗ್ಗದಲ್ಲಿ ಹೋರಿ ದಾಳಿ: ಮಾಜಿ ಶಾಸಕ ಮಹಾಲಿಂಗಪ್ಪರಿಗೆ ಸಣ್ಣ ಗಾಯ
ಶಿವಮೊಗ್ಗ ಜಿಲ್ಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ವೇಳೆ ಅಪಘಾತ ಸಂಭವಿಸಿದೆ. ದೀಪಾವಳಿಯ ಪ್ರಯುಕ್ತ ಬಳ್ಳಿಗಾವಿಯಲ್ಲಿ ಆಯೋಜಿಸಿದ್ದ ಸಾಂಪ್ರದಾಯಿಕ ಹೋರಿ ಬೆದರಿಸುವ ಕ್ರೀಡೆ ವೀಕ್ಷಿಸಲು ಶಿಕಾರಿಪುರದ ಮಾಜಿ ಶಾಸಕ ಮಹಾಲಿಂಗಪ್ಪ ತೆರಳಿದ್ದರು. ಮನೆಯೊಂದರ ಬಾಗಿಲ ಮುಂದೆ ಸ್ಪರ್ಧೆ ನೋಡುತ್ತಿದ್ದ ವೇಳೆ ಬಿಳಿ-ಬೂದು ಬಣ್ಣದ ಹೋರಿ ಅವರತ್ತ ದಾವಿಸಿ, ಎರಡು ಬಾರಿ ಕೊಂಬಿನಿಂದ ತಿವಿದು ಎತ್ತಿಹಾಕಿದೆ. ತಕ್ಷಣವೇ ಮಹಾಲಿಂಗಪ್ಪರು ನೆಲಕ್ಕುರುಳಿದ್ದು, ಸಣ್ಣಪುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ. ಘಟನೆಯ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
