ವರದಿಗಾರರು :
ತೌಕೀರ್ ಖತೀಬ್ ||
ಸ್ಥಳ :
ಬೆಳಗಾವಿ
ವರದಿ ದಿನಾಂಕ :
20-10-2025
ಡಿಸಿಸಿ ಬ್ಯಾಂಕ್ ಚುನಾವಣೆ: ಮಲ್ಲಣ್ಣ ಯಾದವಾಡ ಗೆಲುವಿಗೆ "ಮಾಸ್ಟರ್ ಮೈಂಡ್" ಸಚಿನ್ ಯಾದವಾಡ ಮುಂದಾಳತ್ವ
ಬೆಳಗಾವಿ ಜಿಲ್ಲೆ, 19/10/2025: ಬೆಳಗಾವಿ ಜಿಲ್ಲೆಯಲ್ಲಿ ನಡೆದ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ರಾಮದುರ್ಗ ತಾಲೂಕಿನ ಅಭ್ಯರ್ಥಿ ಶ್ರೀ ಮಲ್ಲಣ್ಣ ಯಾದವಾಡ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಗೆಲುವಿಗೆ ಪ್ರಮುಖ ಕಾರಣಸ್ಥರಾಗಿ ನಿಂತವರು ಯುವ ನಾಯಕ ಸಚಿನ್ ಯಾದವಾಡ, ಚುನಾವಣಾ ಕಣದಲ್ಲೇ ನಿರಂತರವಾಗಿ ನಿಂತು ಮಾಸ್ಟರ್ ಮೈಂಡ್ ಆಗಿ ಕಾರ್ಯನಿರ್ವಹಿಸಿದರು.
ಬೆಳಗಾವಿಯ ರಾಜಕಾರಣ ಎಂದರೆ ಚರ್ಚೆಯಲ್ಲಿರುವ ಜಾರಕಿಹೊಳಿ ಕುಟುಂಬ. ಆ ಕುಟುಂಬದವರಲ್ಲಿ ಸತೀಶ್ ಜಾರಕಿಹೊಳಿ ಅವರನ್ನು ಮಾಸ್ಟರ್ ಮೈಂಡ್ ರಾಜಕಾರಣಿಯಾಗಿ ಕರೆಲಾಗುತ್ತದೆ. ಆದರೆ ಇದೀಗ ಸಚಿನ್ ಯಾದವಾಡ ಎಂಬ ಮತ್ತೊಬ್ಬ ಯುವ ಮುಖಂಡ, ತಮ್ಮ ಕಾರ್ಯತತ್ಪರತೆ ಹಾಗೂ ರಾಜಕೀಯ ಪಟುತನದಿಂದ, ಜಾರಕಿಹೊಳಿ ಶೈಲಿಯ ಮುಂದಾಳತ್ವದ ಉದಾಹರಣೆಯಾಗಿ ಬೆಳಗುತ್ತಿರುವುದು ಸ್ಪಷ್ಟವಾಗಿದೆ. ಈ ಗೆಲುವು ಸಚಿನ್ ಅವರ ಭವಿಷ್ಯದ ರಾಜಕೀಯದಲ್ಲಿ ಬಲವಾದ ಹಾದಿ ಒದಗಿಸಬಹುದು. ಜಿಲ್ಲೆಯ ಯುವಕರು ಮತ್ತು ಕಾರ್ಯಕರ್ತರಲ್ಲಿ ಅವರ ಪ್ರಭಾವ ಹೆಚ್ಚಾಗುತ್ತಿದೆ.
