ವರದಿಗಾರರು :
ಫಯಾಜ್ ತೇಲಿ ||
ಸ್ಥಳ :
ಬಾಗಲಕೋಟೆ
ವರದಿ ದಿನಾಂಕ :
23-10-2025
ಚಾಮರಾಜನಗರದಲ್ಲಿ ಬೈಕ್–ವಾಹನ ಡಿಕ್ಕಿ: ರಾಜಸ್ಥಾನ ಮೂಲದ ಕಾರ್ಮಿಕ ಸಾವು
ಚಾಮರಾಜನಗರ: ಚಾಮರಾಜನಗರ–ನಂಜನಗೂಡು ಮುಖ್ಯರಸ್ತೆಯಲ್ಲಿ ಬೈಕ್ ಮತ್ತು ಗೂಡ್ಸ್ ವಾಹನ ಡಿಕ್ಕಿಯಾಗಿ ರಾಜಸ್ಥಾನ ಮೂಲದ ಕೂಲಿ ಕಾರ್ಮಿಕನೊಬ್ಬ ದುರ್ಮರಣಕ್ಕೀಡಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಬದನಗುಪ್ಪೆ ಕೈಗಾರಿಕಾ ಪ್ರದೇಶದ ಕರಿಕಲ್ಲು ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಕಿಶನ್‌ಲಾಲ್ ಬೈರವ ಬಿನ್ ಕೋರಜ್‌ಮಾಲ್ ಅವರು ದಿನನಿತ್ಯದ ವಸ್ತು ಖರೀದಿಗೆ ಬೈಕ್‌ನಲ್ಲಿ ಹೊರಟ ವೇಳೆ ತರಕಾರಿ ತುಂಬಿದ ವಾಹನಕ್ಕೆ ಡಿಕ್ಕಿಯಾಗಿ ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸಹೋದ್ಯೋಗಿ ಸುರೇಂದರ್‌ಲಾಲ್ ಗಂಭೀರವಾಗಿ ಗಾಯಗೊಂಡು ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಎಎಸ್‌ಐ ಲಿಂಗರಾಜು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತಕ್ಕೊಳಗಾದ ವಾಹನವನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರೆಸಿದ್ದಾರೆ.
