ವರದಿಗಾರರು :
ದರ್ಶನ್ ಎಂ.ಎನ್ ||
ಸ್ಥಳ :
ದಾವಣಗೆರೆ
ವರದಿ ದಿನಾಂಕ :
12-10-2025
150 ಕೋಟಿ ರೂ. ವಂಚನೆ, ಖಾತೆಯಲ್ಲಿ 18 ಕೋಟಿ ರೂ. ಹಣ ಹೊಂದಿದ್ದ ವಂಚಕರು: ಸೆರೆ ಸಿಕ್ಕ ಆರೋಪಿ ಹಿಸ್ಟರಿ ಕೇಳಿದ್ರೆ ಬೆಚ್ಚ�
150 ಕೋಟಿ ರೂ. ವಂಚನೆ, ಖಾತೆಯಲ್ಲಿ 18 ಕೋಟಿ ರೂ. ಹಣ ಹೊಂದಿದ್ದ ವಂಚಕರು: ಸೆರೆ ಸಿಕ್ಕ ಆರೋಪಿ ಹಿಸ್ಟರಿ ಕೇಳಿದ್ರೆ ಬೆಚ್ಚಿ ಬೀಳ್ತೀರಾ!.... ದಾವಣಗೆರೆ: ಸೈಬರ್ ವಂಚನೆ ಪ್ರಕರಣವೊಂದರಲ್ಲಿ ದಾವಣಗೆರೆ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಸುಮಾರು 150 ಕೋಟಿ ರೂಪಾಯಿ ವಂಚಿಸಿದ್ದ ಆರೋಪಿ ಸೆರೆ ಸಿಕ್ಕಿದ್ದೇ ರೋಚಕ. ಮಾತ್ರವಲ್ಲ, ಈತನ ಬ್ಯಾಂಕ್ ಅಕೌಂಟ್ ನಲ್ಲಿ 18 ಕೋಟಿ ರೂಪಾಯಿ ಪತ್ತೆಯಾಗಿದ್ದು, ತನಿಖೆ ಮುಂದುವರಿದಿದೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಶಾಂತಿನಗರದ 28 ವರ್ಷದ ಸೈಯದ್ ಅರ್ಫಾತ್ ಪಾಷಾ ಬಂಧಿತ ಆರೋಪಿ. ಬಂಧಿತನಿಂದ 1 ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಸೈಯದ್ ಅರ್ಫಾತ್ ಪಾಷಾ ಮತ್ತು ಆರೋಪಿತರ ಚಾಲ್ತಿ ಖಾತೆಯಲ್ಲಿ ಜುಲೈ 27 ರಿಂದ ಆಗಸ್ಟ್ 19 ರವರೆಗೆ ಸುಮಾರು 150 ಕೋಟಿ ಆನ್ ಲೈನ್ ಫ್ರಾಡ್ ಮೊತ್ತ ಡಿಪಾಸಿಟ್ ಆಗಿದ್ದು, ಆರೋಪಿಗಳು 132 ಕೋಟಿ ಹಣ ವಿತ್ ಡ್ರಾ ಮಾಡಿದ್ದಾರೆ. ಖಾತೆಯಲ್ಲಿ 18 ಕೋಟಿ ರೂಪಾಯಿ ಇದ್ದು, ಹಣ ಫ್ರೀಜ್ ಮಾಡಿಸಲಾಗಿದೆ. ರೂ. 52,60,400 ಅನ್ನು ದಾವಣಗೆರೆ ಘನ 3ನೇ ಎ.ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ಆದೇಶದಂತೆ ವಂಚನೆಗೊಳಗಾಗಿದ್ದ ಹೆಚ್. ಹೆಚ್. ಪ್ರಮೋದ್ ಅವರಿಗೆ ರಿಫಂಡ್ ಮಾಡಿಸಲಾಗಿದೆ. ಘಟನೆ ಹಿನ್ನೆಲೆ: ದಾವಣಗೆರೆ ನಗರದ ನಿಟುವಳ್ಳಿಯ ಹೆಚ್. ಹೆಚ್. ಪ್ರಮೋದ್ ಅವರು ಅಂಜನಾದ್ರಿ ಕನ್ಸ್ಟ್ರಕ್ಷನ್ ಪ್ರೊಪರೇಟರ್ ಆಗಿದ್ದು ಕಳೆದ 2025ರ ಆಗಸ್ಟ್ 14ರಂದು ಮನೆಯಲ್ಲಿದ್ದಾಗ ಬೆಳಿಗ್ಗೆ 10ಗಂಟೆ ಸಮಯದಲ್ಲಿ ವ್ಯವಹಾರದ ವಹಿವಟಿಗಾಗಿ ತನ್ನ ಮೊಬೈಲ್ ನಿಂದ ಕೆನಾರ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿ ನೋಡಿದಾಗ ಖಾತೆ ಬ್ಲಾಕ್ ಆಗಿತ್ತು. ನಂತರ ಬ್ಯಾಂಕ್ ಗೆ ಹೋಗಿ ಮಾಹಿತಿ ಕೇಳಿದಾಗ ನಿಮ್ಮ ಖಾತೆಯು ಬ್ಲಾಕ್ ಆಗಿರುತ್ತದೆ ಎಂದು ತಿಳಿಸಿದ್ದಾರೆ. ಖಾತೆಯನ್ನು ಆನ್ ಬ್ಲಾಕ್ ಮಾಡಿ ಮಾಹಿತಿ ನೀಡಲು ಬ್ಯಾಂಕ್ ಮ್ಯಾನೇಜರ್ ಅವರಿಗೆ ಪತ್ರ ನೀಡಿ ಬಂದಿದ್ದರು. ನಂತರ ಬ್ಯಾಂಕ್ ಮ್ಯಾನೇಜರ್ ರವರು ಡಿಜಿಟಲ್ ಆನ್ ಲೈನ್ ನಲ್ಲಿ ಅನ್ ಬ್ಲಾಕ್ ಮಾಡಬೇಕು. ನಿವು ಬನ್ನಿ ಅಂತ ಪಿರ್ಯಾದಿಯವರಿಗೆ ತಿಳಿಸಿದ್ದಾರೆ. ಬ್ಯಾಂಕ್ ಗೆ ಹೋಗಿ ಎಲ್ಲಾ ಮಾಹಿತಿ ನೀಡಿ ನಿಮ್ಮ ಖಾತೆಯು 5 ದಿನದ ನಂತರ ನಿಮ್ಮ ಖಾತೆಯು ಓಪನ್ ಆಗುತ್ತದೆ ಎಂದು ಹೇಳಿದ್ದಾರೆ. ಪಿರ್ಯಾದಿಯು ದಿನಾಂಕ: 18-08-2025 ರಂದು ಬ್ಯಾಂಕ್ ಗೆ ಹೋಗಿ ಮತ್ತೆ ಪತ್ರ ವ್ಯವಹಾರ ಮಾಡಿ ಬಂದಿದ್ದಾರೆ. ಪುನಃ ಮತ್ತೆ ಪ್ರಮೋದ್ ಅವರು 25-08-2025 ರಂದು ಬ್ಯಾಂಕ್ ಗೆ ಹೋಗಿ ಖಾತೆಯನ್ನು ಪರಿಶೀಲಿಸಿದಾಗ ತಮ್ಮ ಖಾತೆಯಲ್ಲಿ 4,956 ರೂ ಮಾತ್ರ ಬ್ಯಾಲೆನ್ಸ್ ತೋರಿಸಿದೆ. ತಕ್ಷಣ ಬ್ಯಾಂಕ್ ಮ್ಯಾನೇಜರ್ ರವರಿಗೆ ಒಟ್ಟು ರೂ. 52,60,523 ಹಣದ ಮೊತ್ತ ದ ಬಗ್ಗೆ ಮಾಹಿತಿ ಕೇಳಿದಾಗ ಮ್ಯಾನೇಜರ್ ರವರು ನಿಮ್ಮ ಖಾತೆಯಲ್ಲಿಇದ್ದ ಹಣವು ನೆಟ್ ಬ್ಯಾಂಕಿಂಗ್ ಮೂಲಕ ವರ್ಗಾವಣೆ ಆಗಿರುತ್ತದೆ ಎಂದು ಹೇಳಿದ್ದಾರೆ. ಗಮನಕ್ಕೆ ಬಾರದೇ ತಮ್ಮ ಖಾತೆಯಲ್ಲಿ ಇದ್ದ ಒಟ್ಟು ರೂ. 52,60,400 ಹಣವನ್ನು ಯಾರೋ ಅಪರಿಚಿತರು ಆನ್ ಲೈನ್ ನೆಟ್ ಬ್ಯಾಂಕ್ ಮೂಲಕ ಹಣವನ್ನು ವರ್ಗಾವಣೆ ಮಾಡಿಕೊಂಡಿರುತ್ತಾರೆಂದು ತಿಳಿಸಿದ್ದು. ಕೂಡಲೇ 29ನೇ ತಾರೀಖಿನಂದು ಸೈಬರ್ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ಆರೋಪಿತನ ಪತ್ತೆಗಾಗಿ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ರವರುಗಳ ಮಾರ್ಗದರ್ಶನದಲ್ಲಿ ಸೈಬರ್ ಆಪರಾಧ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕ ಬಂಕಾಳಿ ನಾಗಪ್ಪ ನೇತೃತ್ವದಲ್ಲಿ ಸಿಬ್ಬಂದಿಯವರಾದ ಅಶೋಕ, ಸುರೇಶ್, ಮುತ್ತುರಾಜ್, ನಿಜಲಿಂಗಪ್ಪ ರವರ ತಂಡವು ಕಾರ್ಯಚರಣೆ ಕೈಗೊಂಡಿತ್ತು. ಪ್ರಕರಣದ 2ನೇ ಆರೋಪಿ ಸಿಸಿಟಿವಿ ಕೆಲಸ ಮಾಡುತ್ತಿದ್ದ ಸೈಯದ್ ಅರ್ಫಾತ್ ನನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಇನ್ನು ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದು ಪತ್ತೆ ಕಾರ್ಯ ಮತ್ತು ತನಿಖೆ ಮುಂದುವರೆದಿದೆ.
ಉತ್ತರ ಪ್ರದೇಶದ ಗಾಜೀಯ ಬಾದ್, ಜಮ್ಮು ಮತ್ತು ಕಾಶ್ಮೀರ ದ ಶ್ರೀನಗರ, ಆಂಧ್ರ ಪ್ರದೇಶದ ಏಲೂರು, ಮಹರಾಷ್ಟ್ರದ ಮುಂಬೈ ಸಿಟಿ, ಕರ್ನಾಟಕದ ಬೆಂಗಳೂರು ಸಿಟಿ ಹಾಗೂ ದಾವಣಗೆರೆ ಜಿಲ್ಲೆಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ.ಆರೋಪಿತನು ದೇಶದ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಸೈಬರ್ ವಂಚನೆ ಪ್ರರಕಣಗಳ ಭಾಗಿಯಾಗಿದ್ದು, ಇದೇ ಮೊದಲ ಬಾರಿಗೆ ದಾವಣಗೆರೆ ಜಿಲ್ಲೆಯ ಸೈಬರ್ ಪೊಲೀಸ್ ಕಾರ್ಯಚರಣೆ ತಂಡದಿಂದ ಬಂಧಿತನಾಗಿದ್ದಾನೆ.
ಉತ್ತರ ಪ್ರದೇಶದ ಗಾಜೀಯ ಬಾದ್, ಜಮ್ಮು ಮತ್ತು ಕಾಶ್ಮೀರ ದ ಶ್ರೀನಗರ, ಆಂಧ್ರ ಪ್ರದೇಶದ ಏಲೂರು, ಮಹರಾಷ್ಟ್ರದ ಮುಂಬೈ ಸಿಟಿ, ಕರ್ನಾಟಕದ ಬೆಂಗಳೂರು ಸಿಟಿ ಹಾಗೂ ದಾವಣಗೆರೆ ಜಿಲ್ಲೆಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ.ಆರೋಪಿತನು ದೇಶದ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಸೈಬರ್ ವಂಚನೆ ಪ್ರರಕಣಗಳ ಭಾಗಿಯಾಗಿದ್ದು, ಇದೇ ಮೊದಲ ಬಾರಿಗೆ ದಾವಣಗೆರೆ ಜಿಲ್ಲೆಯ ಸೈಬರ್ ಪೊಲೀಸ್ ಕಾರ್ಯಚರಣೆ ತಂಡದಿಂದ ಬಂಧಿತನಾಗಿದ್ದಾನೆ.
