ವರದಿಗಾರರು :
ಗುರುಬಸವರಾಜ, ||
ಸ್ಥಳ :
ಹರಪನಹಳ್ಳಿ
ವರದಿ ದಿನಾಂಕ :
28-10-2025
ಹರಪನಹಳ್ಳಿಯಲ್ಲಿ ಲಾಠಿ ದಾದಾಪೀರ್ ಅವಿರೋಧ ಅಧ್ಯಕ್ಷರಾಗಿ ಆಯ್ಕೆ
ಹರಪನಹಳ್ಳಿ: ತಾಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (PLD) ನ ನೂತನ ಅಧ್ಯಕ್ಷರಾಗಿ ನಗರಸಭಾ ಸದಸ್ಯರಾದ ಲಾಠಿ ದಾದಾಪೀರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ಅನೇಕರು ಹಾಜರಿದ್ದು, ಲಾಠಿ ದಾದಾಪೀರ್ ಅವರಿಗೆ ಅಭಿನಂದನೆ ಸಲ್ಲಿಸಿದರು.
