ವರದಿಗಾರರು :
ಡಾ. ಜ್ಯೋತಿ ||
ಸ್ಥಳ :
ತುಮಕೂರು
ವರದಿ ದಿನಾಂಕ :
30-10-2025
ಯಶಸ್ವಿನಿ ಟ್ರಸ್ಟಿ ನೇಮಕ ಹಿಂಪಡೆದ ಸಿಎಂ ಕ್ರಮಕ್ಕೆ ಶಶಿಧರ್ ಸ್ವಾಗತ
ತಿಪಟೂರು: ತಾನು ಬರೆದ ಪತ್ರಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ಟ್ರಸ್ಟಿಯಾಗಿ ತಿಪಟೂರು ತಾಲೂಕು ಕುಮಾರ ಆಸ್ಪತ್ರೆಯ ವೈದ್ಯ ಡಾ. ಶ್ರೀಧರ್ ಅವರ ನೇಮಕವನ್ನು ಹಿಂಪಡೆದ ಕ್ರಮವನ್ನು ಸ್ವಾಗತಿಸುತ್ತೇನೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಿ.ಬಿ. ಶಶಿಧರ್ ತಿಳಿಸಿದ್ದಾರೆ.
ಆರ್‌ಎಸ್‌ಎಸ್ ಕಾರ್ಯಕರ್ತನಾದ ಡಾ. ಶ್ರೀಧರ್ ಅವರನ್ನು ಟ್ರಸ್ಟಿಯನ್ನಾಗಿ ನೇಮಿಸಿರುವ ಸರ್ಕಾರದ ನಿರ್ಧಾರಕ್ಕೆ ತಿಪಟೂರು ಕಾಂಗ್ರೆಸ್ ಶಾಸಕ ಕೆ. ಷಡಕ್ಷರಿ ಸಹಕಾರ ನೀಡಿದ್ದರಿಂದ ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನ ಉಂಟಾಗಿತ್ತು.
“ಈ ಬಗ್ಗೆ ನಾನು ಸಿಎಂ ಅವರಿಗೆ ಪತ್ರ ಬರೆದಿದ್ದೆ. ಅದಕ್ಕೆ ಸ್ಪಂದಿಸಿ ನೇಮಕ ರದ್ದುಗೊಳಿಸಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ನೈತಿಕ ಬಲ ಹೆಚ್ಚಿಸಿದೆ. ಆರ್‌ಎಸ್‌ಎಸ್‌ನವರಲ್ಲದ ಯಾರನ್ನಾದರೂ ಟ್ರಸ್ಟಿಯನ್ನಾಗಿ ನೇಮಿಸಿದರೆ ನಮ್ಮಿಗೆ ಯಾವುದೇ ತಕರಾರಿಲ್ಲ,” ಎಂದು ಸಿ.ಬಿ. ಶಶಿಧರ್ ತಿಳಿಸಿದ್ದಾರೆ
