ವರದಿಗಾರರು :
ಹೊಳೆಯಪ್ಪ ಕಂಬಾರ, ||
ಸ್ಥಳ :
ಬಾದಾಮಿ
ವರದಿ ದಿನಾಂಕ :
02-11-2025
ಬಾದಾಮಿಯಲ್ಲಿ ರಾಜ್ಯೋತ್ಸವ ಭಾವೈಕ್ಯತೆಯಿಂದ ಆಚರಣೆ
ಬಾದಾಮಿ, ನವೆಂಬರ್ 1: ಇಂದು ಕರ್ನಾಟಕ ರಾಜ್ಯೋತ್ಸವವನ್ನು ಬಾದಾಮಿಯಲ್ಲಿ ಭಾರೀ ಸಂಭ್ರಮದಿಂದ ಆಚರಿಸಲಾಯಿತು. ಬಾದಾಮಿ ತಾಲೂಕು ಜಯ ಕರ್ನಾಟಕ ಸಂಘದ ವತಿಯಿಂದ ಕರ್ನಾಟಕ ಮಾತೆಯ ಭಾವಚಿತ್ರವನ್ನು ಮೆರವಣಿಗೆ ಮಾಡುತ್ತಾ ಉತ್ಸವವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಬಾದಾಮಿ ತಹಶೀಲ್ದಾರ್ ಕಾವ್ಯಶ್ರೀ ಎಚ್ ಅವರು, ಜಯ ಕರ್ನಾಟಕ ಸಂಘದ ಕಾರ್ಯಕರ್ತರಾದ ಜಾಕಿರ್ ಮುದ್ದೆಭಿಹಾಳ ಹಾಗೂ ಇತರರು ಭಾಗವಹಿಸಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಶಾಲಾ ಮಕ್ಕಳಿಂದ ಕನ್ನಡಾಂಬೆಗೆ ಜಯಘೋಷಣೆಗಳನ್ನು ಕೂಗಿ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ರಾಜ್ಯೋತ್ಸವವನ್ನು ಹರ್ಷೋಲ್ಲಾಸದಿಂದ ಆಚರಿಸಲಾಯಿತು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
