ವರದಿಗಾರರು :
ಮಲ್ಲಿಕಾರ್ಜುನ್ ||
ಸ್ಥಳ :
ಕಲ್ಬುರ್ಗಿ
ವರದಿ ದಿನಾಂಕ :
28-10-2025
ಎಸ್‌ಟಿ ಹೋರಾಟ ಸಂಘದಿಂದ ನ.17ರಂದು ಬೃಹತ್ ಪ್ರತಿಭಟನೆ ಘೋಷಣೆ
ಬೀದರ್: ಕರ್ನಾಟಕ ರಾಜ್ಯ ಎಸ್‌ಟಿ ಹೋರಾಟ ಸಂಘದ ರಾಜ್ಯಾಧ್ಯಕ್ಷ ಲಚ್ಚಪ್ಪ ಜಮಾದಾರ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಅವರು ಮಾತನಾಡುತ್ತಾ, “ರಾಜ್ಯದಲ್ಲಿರುವ ಕೋಲಿ, ಕಬ್ಬಲಿಗ, ಅಂಬಿಗ ಹಾಗೂ ಬೆಸ್ತ ಸಮುದಾಯಗಳು ಎಸ್‌ಟಿ ಹಕ್ಕು ಪಡೆಯುವಲ್ಲಿ ಅನ್ಯಾಯಕ್ಕೆ ಒಳಗಾಗಿವೆ” ಎಂದು ಹೇಳಿದರು.
“ಟೋಕ್ರೆ ಎಂಬುದು ಕೋಲಿ ಪರ್ಯಾಯ ಪದವಲ್ಲ. ಟೋಕ್ರೆ ಕೋಲಿ ಎಂಬ ಪದವನ್ನು ತಪ್ಪಾಗಿ ಬಳಕೆ ಮಾಡಲಾಗುತ್ತಿದೆ. ನಿಜವಾಗಿ ನಮ್ಮ ಸಮಾಜಕ್ಕೆ ಎಸ್‌ಟಿ ಸ್ಥಾನಮಾನ ಸಿಕ್ಕಬೇಕಾದರೆ ಹೊಸ ಕುಲಶಾಸ್ತ್ರೀಯ ಅಧ್ಯಯನ ನಡೆಸಿ, ಕೋಲಿ, ಕಬ್ಬಲಿಗ, ಅಂಬಿಗ, ಬೆಸ್ತ ಸೇರಿದಂತೆ ನಾಲ್ಕು ಪದಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು” ಎಂದು ಅವರು ಒತ್ತಾಯಿಸಿದರು.
ಇದಲ್ಲದೆ, “ಗಂಗಾಮತ ಎಂದು ಹೇಳುವ ಮೂಲಕ ನಮ್ಮ ಸಮುದಾಯದ ಹಕ್ಕು ಹರಾಜಾಗುತ್ತಿದೆ. ಈ ಅನ್ಯಾಯ ಪಟ್ಟಭದ್ರ ಹಿತಾಸಕ್ತಿಯಿಂದ ನಡೆಯುತ್ತಿದ್ದು, ತಳವರಿಗರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ಆಗುತ್ತಿದೆ. ಈ ಅನ್ಯಾಯವನ್ನು ಸರಿಪಡಿಸಲು ನವೆಂಬರ್ 17ರಂದು ಬೃಹತ್ ಹೋರಾಟ ನಡೆಸಲಾಗುವುದು” ಎಂದು ಲಚ್ಚಪ್ಪ ಜಮಾದಾರ ಹೇಳಿದರು.
