ವರದಿಗಾರರು :
ಹುಲಗಪ ಎಮ್ ಹವಾಲ್ದಾರ ||
ಸ್ಥಳ :
ಯಾದಗಿರಿ
ವರದಿ ದಿನಾಂಕ :
18-10-2025
ಗ್ರಾಮ ಸ್ವರಾಜ್ ಅಭಿಯಾನದ ಒಂದು ದಿನದ ಸಮಾಲೋಚನಾ ಸಭೆ ಹಮ್ಮಿಕೊಳ್ಳಲಾಯಿತು
ಜಿಲ್ಲಾ ಪಂಚಾಯತ್ ಯಾದಗಿರಿ ಸಭಾಂಗಣದಲ್ಲಿ ಗ್ರಾಮ ಸ್ವರಾಜ್ ಅಭಿಯಾನದ ಕಲ್ಯಾಣ ಕರ್ನಾಟಕ ವಿಭಾಗದ ಸ್ವಯಂ ಸೇವಾ ಸಂಸ್ಥೆಗಳಿಗೆ ಒಂದು ದಿನದ ಗ್ರಾಮ ಸ್ವರಾಜ್ ಅಭಿಯಾನದ ಹೆಜ್ಜೆಗಳ ಸಮಾಲೋಚನಾ ಸಭೆ ಹಮ್ಮಿಕೊಳ್ಳಲಾಗಿತ್ತು
ಈ ಸಭೆಯಲ್ಲಿ ಗ್ರಾಮ ಸ್ವರಾಜ್ ಅಭಿಯಾನದ ರಾಜ್ಯ ಸಮಿತಿ ಸಂಚಾಲಕರಾದ ಅಶೋಕ್ ಯರಗಟ್ಟಿ ಇವರು ಮಾತನಾಡಿ ಈಗಾಗಲೇ 50 ತಾಲೂಕುಗಳಲ್ಲಿ ಒಂದು ತಾಲೂಕಿನಲ್ಲಿ 300 ಜನಕಾಯಕ ಬಂಧುಗಳಿಗೆ ತರಬೇತಿ ನೀಡುವುದರ ಜೊತೆಗೆ ಕಾಯಕ ಬಂದುಗಳ ಗುರಿ, ಉದ್ದೇಶ,ಜವಾಬ್ದಾರಿ ಬಗ್ಗೆ ತರಬೇತಿ ನೀಡಿ ಪ್ರಮಾಣ ಪತ್ರವನ್ನು ಕೊಟ್ಟು ಕಾಯಕ ಬಂದುಗಳಿಗೆ ಕೆಲಸ ಕೊಟ್ಟಿದ್ದೇವೆ
ಮತ್ತು ಕಾಯಕ ಬಂದುಗಳು ಕೂಡ ಕೆಲಸ ಮಾಡ್ತಾಇದ್ದಾರೆ ತಮ್ಮ ತಾಲೂಕುಗಳಲ್ಲಿ ಕಾರ್ಮಿಕರ ಇಕೆವೈಸಿ ಕೂಡ ಕಡ್ಡಾಯವಾಗಿದೆ ಆದಕಾರಣ ಎಲ್ಲಾ ಕಾಯಕ ಬಂಧುಗಳು ಕಡ್ಡಾಯ ಮಾಡಲೇಬೇಕು ಯಾದಗಿರಿ ಜಿಲ್ಲೆಯ ಎಂಐಎಸ್ ಮಾಡಬೇಕು ಎಂದು ಹೇಳಿದರು
ಸದರಿ ಈ ಕಾರ್ಯಕ್ರಮದಲ್ಲಿ ರಾಜ ಸಮಿತಿ ಸದಸ್ಯರು ಸುಗುರಯ್ಯ ಸ್ವಾಮಿ,ಸ್ವಯಂ ಸೇವಾ ಸಂಸ್ಥೆಗಳ ಅಧ್ಯಕ್ಷರುಗಳಾದ ಚಂದಪ್ಪ ಯಾದವ್, ಶರಣಪ್ಪ ಗುರುಮಿಟ್ಕಲ್, ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ವೆಂಕಟೇಶ ದೊರೆ, ದೇವೇಂದ್ರಪ್ಪ ಬೋವಿ,ಬಸವರಾಜ್, ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾದ ನಿಂಗಪ್ಪ, ಅಂಜಪ್ಪ, ಅಯ್ಯಣ್ಣ ಯಾದವ್,ಎಲ್ಲಾ ತಾಲೂಕಿನ ಆಯ್ದ ಕಾಯಕ ಬಂದುಗಳು ಭಾಗಿಯಾಗಿದ್ದರು
