ವರದಿಗಾರರು :
ಹುಲಗಪ್ಪ ಎಂ. ಹವಾಲ್ದಾರ ||
ಸ್ಥಳ :
ಯಾದಗಿರಿ
ವರದಿ ದಿನಾಂಕ :
03-11-2025
ಜಯಕರ್ನಾಟಕ ಜನಪರ ವೇದಿಕೆಯಿಂದ ಕನ್ನಡ ರಾಜ್ಯೋತ್ಸವದ ಸಡಗರ
ಸುರಪುರ: ಜಯಕರ್ನಾಟಕ ಜನಪರ ವೇದಿಕೆಯ ವತಿಯಿಂದ ದೀವಳಗುಡ್ಡದಲ್ಲಿ ವೇದಿಕೆಯ ೫ನೇ ವರ್ಷದ ಸ್ಥಾಪನಾ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವವನ್ನು ಹರ್ಷೋಲ್ಲಾಸದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ನಡೆದ ಧ್ವಜಾರೋಹಣವನ್ನು ವೇದಿಕೆಯ ಯಾದಗಿರಿ ಜಿಲ್ಲಾ ಕಾರ್ಯಾಧ್ಯಕ್ಷ ರವಿಕುಮಾರ ನಾಯಕ ಭೈರಿಮಡ್ಡಿ ನೆರವೇರಿಸಿದರು. ಅವರು ಮಾತನಾಡಿ —
“ನಮ್ಮ ವೇದಿಕೆ ಗುಣರಂಜನ ಶೆಟ್ಟಿ ಅವರ ನೇತೃತ್ವದಲ್ಲಿ ಕನ್ನಡ ಪರ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಿದೆ. ಕನ್ನಡ ನಮ್ಮ ಉಸಿರು, ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮನಾಗಬೇಕು. ಸರ್ಕಾರಿ ಸೇವೆಯಷ್ಟೇ ಅಲ್ಲದೆ ಖಾಸಗಿ ಕ್ಷೇತ್ರಗಳಲ್ಲೂ ಕನ್ನಡಿಗರಿಗೆ ಮೀಸಲಾತಿ ದೊರಕಬೇಕೆಂಬ ಹೋರಾಟವನ್ನು ನಮ್ಮ ವೇದಿಕೆ ಮುಂದುವರಿಸುತ್ತಿದೆ,” ಎಂದು ಹೇಳಿದರು.
ಧ್ವಜಾರೋಹಣದ ನಂತರ ಲಕ್ಷ್ಮೀಪುರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು. ಪರಿಸರ ಸಂರಕ್ಷಣೆಯ ಮಹತ್ವವನ್ನು ಎಲ್ಲರಿಗೂ ಅರಿವು ಮಾಡಿಸಲು ಈ ಕಾರ್ಯಕ್ರಮ ಆಯೋಜಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕಿ ಹಸೀನಾ ಬಾನು ಮಾತನಾಡಿ —
“ಪರಿಸರ ರಕ್ಷಣೆ ಇಂದಿನ ಅತ್ಯವಶ್ಯಕತೆ. ಜಯಕರ್ನಾಟಕ ಜನಪರ ವೇದಿಕೆ ಈ ನಿಟ್ಟಿನಲ್ಲಿ ಶ್ಲಾಘನೀಯ ಕೆಲಸ ಮಾಡುತ್ತಿದೆ,” ಎಂದು ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕಾಧ್ಯಕ್ಷ ಗೋಪಾಲನಾಯಕ ಸತ್ಯಂಪೇಟ, ಮಾಜಿ ಸೈನಿಕ ಭೀಮಣ್ಣ ಪೀರಬಾಯಿ, ಮಲ್ಲಿಕಾರ್ಜುನ ಜಟಗಿಮಠ, ಶಿವರಾಜ, ಶಾರದಾ, ಸವಿತಾ ಮಠ, ಖಾಜಬಿ, ಹಾಗೂ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.
ವೇದಿಕೆಯ ವಿವಿಧ ಹುದ್ದೆದಾರರು ಹಾಗೂ ಸದಸ್ಯರು — ಗೌರವಾಧ್ಯಕ್ಷ ಶಿವರಾಜನಾಯಕ ಸತ್ಯಂಪೇಟ, ಪ್ರಧಾನ ಕಾರ್ಯದರ್ಶಿ ದೇವುನಾಯಕ ಜಾಲಿಬೆಂಚಿ, ಉಪಾಧ್ಯಕ್ಷರು ರವಿ ಹುಲಕಲ್, ರಾಘವೇಂದ್ರ ಎಲಿಗಾರ, ಬಸವರಾಜ ಪಾಟೀಲ ಶಾಖಾಪುರ, ಸಂಚಾಲಕ ನಿಂಗಣ್ಣ ದುಸ್ತಾರಿ, ಖಜಾಂಚಿ ಬಸಪ್ಪ ಯಾಳವಾರ ಮತ್ತು ಅನೇಕರು ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸಿದರು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
