ವರದಿಗಾರರು :
ಸುನೀತಾ ಹಿರೇಮಠ ||
ಸ್ಥಳ :
ಕೊಪ್ಪಳ
ವರದಿ ದಿನಾಂಕ :
02-11-2025
ಕೊಪ್ಪಳದಲ್ಲಿ ಅಖಿಲ ಕರ್ನಾಟಕ ಶಾಲಾ-ಕಾಲೇಜು ಸಭೆ
ಕೊಪ್ಪಳ ಜಿಲ್ಲೆ ಕನಕಗಿರಿಯ ಶ್ರೀ ರುದ್ರಸ್ವಾಮಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಅಖಿಲ ಕರ್ನಾಟಕ ಅನುದಾನಿತ ಶಾಲಾ-ಕಾಲೇಜುಗಳ ಕೊಪ್ಪಳ ಜಿಲ್ಲಾ ಕಾರ್ಯಕಾರಿಣಿ ಸಭೆ ಆಯೋಜಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಶ್ರೀ ಹನುಮಂತಪ್ಪ ಚಲವಾದಿ ವಹಿಸಿದ್ದರು. ಅಧ್ಯಕ್ಷರು ಅಖಿಲ ಕರ್ನಾಟಕ ಅನುದಾನಿತ ಶಾಲಾ-ಕಾಲೇಜುಗಳ ಸಂಘದ ಅಧ್ಯಕ್ಷರಾಗಿದ್ದು, ಮುಖ್ಯ ಅತಿಥಿ ಸ್ಥಾನವನ್ನು ವಹಿಸಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಭೆಯಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿಗಳು ಶ್ರೀ ಶ್ರೀನಿವಾಸ್ ನಾಯ್ಡು, ಜಿಲ್ಲಾ ಖಜಾಂಚಿಗಳು ಶ್ರೀ ಶಿವಾನಂದ ಹಿರೇಮಠ್, ಹಾಗೂ ಕೊಪ್ಪಳ, ಕುಷ್ಟಗಿ, ಯಲಬುರ್ಗಾ, ಗಂಗಾವತಿ ತಾಲೂಕುಗಳ ಅಧ್ಯಕ್ಷರು ಪ್ರಮುಖ ಅತಿಥಿಗಳಾಗಿ ಹಾಜರಿದ್ದರು. ಸ್ಥಳೀಯ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳು ಶ್ರೀಯುತ ರಮೇಶ್ ಕೆ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಶ್ರೀಯುತ ರಾಜು ಪೂಜಾರಿ ಪ್ರಾಸ್ತಾವಿಕವಾಗಿ ಜಿಲ್ಲಾ ಸಂಘಟನೆ ಮತ್ತು ಸಮ್ಮೇಳನದ ಕುರಿತು ನೋಟಿ ನಮನವನ್ನು ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಡಿಸೆಂಬರ್ 2025 ರಲ್ಲಿ ಜಿಲ್ಲಾಮಟ್ಟದ ಅಖಿಲ ಕರ್ನಾಟಕ ಅನುದಾನಿತ ಶಾಲಾ-ಕಾಲೇಜುಗಳ ಸಮ್ಮೇಳನವನ್ನು ಆಯೋಜಿಸಲು ತೀರ್ಮಾನಿಸಲಾಯಿತು. ಜಿಲ್ಲಾ ಸಮ್ಮೇಳನದ ರೂಪವೇಷ ಕುರಿತು ಯಲಬುರ್ಗಾ ತಾಲ್ಲೂಕು ಅಧ್ಯಕ್ಷ ಶ್ರೀಯುತ ಸಿದ್ದ ರೆಡ್ಡಿ ಸರ್ ಮತ್ತು ವಿವಿಧ ತಾಲ್ಲೂಕು ಅಧ್ಯಕ್ಷರು, ಡಾ. ರಮೇಶ್ ನಾಯಕ್, ಶ್ರೀ ನಿಂಗಪ್ಪ ಗುಂಡೂರ್, ಶ್ರೀ ಸತೀಶ್ ಕುಲಕರ್ಣಿ, ಶ್ರೀ ಪಾಟೀಲ್ ಸರ್ ತಮ್ಮ ಆಲೋಚನೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ಪದಾಧಿಕಾರಿಗಳು ಮತ್ತು ಶಿಕ್ಷಕ ವೃಂದದವರು ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆ ಶ್ರೀ ಮೌನೇಶ್ ಬಡಿಗಾರ್ ನಡೆಸಿದರು ಮತ್ತು ವಂದನೆಗಳನ್ನು ಗೌಡರ್ ಸರ್ ನಿರ್ವಹಿಸಿದರು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
