ವರದಿಗಾರರು :
ಗಿರೀಶ್ ಕೆ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
29-10-2025
ವಾಟ್ಸಪ್ ನಲ್ಲಿ ಫೇಸ್ಬುಕ್ ಮಾದರಿ ಕವರ್ ಫೋಟೋ ವೈಶಿಷ್ಟ್ಯ ಶೀಘ್ರದಲ್ಲೇ!
ವಾಟ್ಸಪ್ ಅನ್ನು ಬಳಕೆದಾರರ ಅನುಭವವನ್ನು ಮತ್ತಷ್ಟು ಸುಧಾರಿಸಲು ಫೇಸ್ಬುಕ್ ನಂತಹ ಕವರ್ ಫೋಟೋ ವೈಶಿಷ್ಯವನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. WABETSINFO ವರದಿಗಳ ಪ್ರಕಾರ ಆಂಡ್ರಾಯ್ಡ್ ಗಾಗಿ ವಾಟ್ಸಾಪ್ ಬೀಟಾ 2.25.32.2 ನಲ್ಲಿ ಈ ವೈಶಿಷ್ಟ್ಯದ ಪರೀಕ್ಷೆ ನಡೆಯುತ್ತಿದೆ, ಬಳಕೆದಾರರು ತಮ್ಮ ಪ್ರೊಫೈಲ್ ನಲ್ಲಿ ಕವರ್ ಫೋಟೋವನ್ನು ಸೇರಿಸಲು ಸಾಧ್ಯವಾಗಲಿದ್ದು ಇದನ್ನು 'Everyone ', My Contacts ಅಥವ 'Nobody ' ಮಾಹಿತಿಗಳ ಮೂಲಕ ಯಾರು ನೋಡಬಹುದು ಎಂಬುದನ್ನು ನಿರ್ಧರಿಸಬಹುದು
