ವರದಿಗಾರರು :
ಶ್ರೀನಿವಾಸ್ ಹೆಚ್ ||
ಸ್ಥಳ :
ತುಮಕೂರು
ವರದಿ ದಿನಾಂಕ :
27-10-2025
ರೈತರಿಗೆ 1250 ರೂಪಾಯಿಗಳ ಸಹಾಯಧನ
ಕರ್ನಾಟಕ ಸರ್ಕಾರವು ರೈತರ ಆರ್ಥಿಕ ಸಬಲೀಕರಣ ಮತ್ತು ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ನಿರಂತರವಾಗಿ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇಂಧನದ ಏರಿಕೆಯಿಂದಾಗಿ ರೈತರ ಮೇಲಿನ ಆರ್ಥಿಕ ಒತ್ತಡವನ್ನು ಕಡಿಮೆ ಮಾಡಲು ರೈತ ಶಕ್ತಿ ಯೋಜನೆಯನ್ನು ಕೃಷಿ ಇಲಾಖೆಯಲ್ಲಿ ಆರಂಭಿಸಲಾಗಿದೆ. ಯೋಜನೆಯ ಮೂಲಕ ರಾಜ್ಯದ ರೈತರಿಗೆ ಪ್ರತಿ ಎಕರೆಗೆ 250ಗಳಂತೆ ಗರಿಷ್ಠ 1250ಗಳ ಸಹಾಯಧನವನ್ನು ನೇರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಈ ಸಹಾಯಧನವು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಯಾಗುವುದರಿಂದ ಪಾವತಿಯಲ್ಲಿ ಪಾರದರ್ಶಕತೆಯನ್ನು ಕಾಪಾಡಲಾಗುತ್ತದೆ ಮತ್ತು ಮಧ್ಯವರ್ತಿಗಳ ಹಸ್ತಕ್ಷೇಪವನ್ನು ತಪ್ಪಿಸಲಾಗುತ್ತದೆ. ರೈತ ಶಕ್ತಿ ಯೋಜನೆಯು ರೈತರಿಗೆ ಕೇವಲ ಆರ್ಥಿಕ ಸಹಾಯವನ್ನು ಮಾತ್ರವಲ್ಲದೆ ಒಟ್ಟಾರೆ ಕೃಷಿ ಉತ್ಪಾದನೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ
