ವರದಿಗಾರರು :
ಮೀನಾಕ್ಷಿ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
24-03-2025
ಆರ್ಸಿಬಿ ಮುಂದಿನ ಪಂದ್ಯ ಸಿಎಸ್ಕೆ ವಿರುದ್ಧ |
ಆರ್ಸಿಬಿ ಮುಂದಿನ ಪಂದ್ಯ ಇದೇ ವಾರ ಶುಕ್ರವಾರದಂದು ನಡೆಯಲಿದೆ. ಅಂದರೆ ಮಾರ್ಚ್ 29 ರಂದು ಎರಡನೇ ಪಂದ್ಯ ನಡೆಯಲಿದೆ. ವಿಶೇಷ ಅಂದ್ರೆ ಶುಕ್ರವಾರ, ಆರ್ಸಿಬಿ ಅಭಿಮಾನಿಗಳ ಬದ್ಧವೈರಿ ತಂಡ ಸಿಎಸ್ಕೆ ವಿರುದ್ಧ ಮ್ಯಾಚ್ ಇದೆ. ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡಗಳ ನಡುವೆ ಕಾದಾಟ ನಡೆಯಲಿದೆ. ಶುಕ್ರವಾರ ಸಂಜೆ 7 ಗಂಟೆಗೆ ಟಾಸ್ ಪ್ರಕ್ರಿಯೆ, 7.30 ರಿಂದ ಪಂದ್ಯಗಳು ಆರಂಭವಾಗಲಿದೆ. ಚೆನ್ನೈನ ಎಂ.ಚಿದಂಬರಂ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ರೋಚಕ ಪಂದ್ಯವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಈಗಾಗಲೇ ಟಿಕೆಟ್ ಖರೀದಿಸಿ ತುದಿಗಾಲಲ್ಲಿ ನಿಂತಿದ್ದಾರೆ.ಇನ್ನು ನಿನ್ನೆ ನಡೆದ ಪಂದ್ಯದಲ್ಲಿ ಸಿಎಸ್ಕೆ ಮುಂಬೈ ವಿರುದ್ಧ 4 ವಿಕೆಟ್ಗಳ ಜಯಗಳಿಸಿದೆ. ಎರಡೂ ತಂಡಗಳು ಒಂದೊಂದು ಗೆಲುವು ಸಾಧಿಸಿದ್ದು, ಮತ್ತೊಂದು ಗೆಲುವಿಗಾಗಿ ಎದುರು ನೋಡುತ್ತಿವೆ. ಇನ್ನು, ಆರ್ಸಿಬಿ ತಂಡದ ಬೌಲಿಂಗ್ ವಿಭಾಗದಲ್ಲಿ ಸಣ್ಣ ಬದಲಾವಣೆಯಾದರೂ ಅಚ್ಚರಿ ಇಲ್ಲ. ಕಳೆದ ಪಂದ್ಯದಲ್ಲಿ ಹಿರಿಯ ಆಟಗಾರ ಭುವನೇಶ್ವರ್ ಕುಮಾರ್ ಅವರನ್ನು ಬೆಂಚ್ನಲ್ಲಿ ಕೂರಿಸಲಾಗಿತ್ತು. ಪರಿಣಾಮ ಕೆಕೆಆರ್ ವಿರುದ್ಧ ಬೌಲಿಂಗ್ ವಿಭಾಗದಲ್ಲಿ ಕೊಂಚ ಹಿನ್ನಡೆ ಆಗಿತ್ತು. ಹೀಗಾಗಿ ಆರ್ಸಿಬಿ ಬದಲಾವಣೆಯೊಂದಿಗೆ ಸಿಎಸ್ಕೆ ವಿರುದ್ಧ ಕಣಕ್ಕಿಳಿದರೂ ಅಚ್ಚರಿ ಇಲ್ಲ.
