ವರದಿಗಾರರು :
ಶಾಹಿದ್ ಶೇಖ್ ||
ಸ್ಥಳ :
ಹಗರಿಬೊಮ್ಮನಹಳ್ಳಿ
ವರದಿ ದಿನಾಂಕ :
02-05-2025
ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದಲ್ಲಿ ಭಾರತ $100 ಬಿಲಿಯನ್ ಗುರಿ ಸಾಧಿಸಲಿದೆ: ಮುಕೇಶ್ ಅಂಬಾನಿ
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಭಾರತೀಯ ಮಾಧ್ಯಮ ಹಾಗೂ ಮನರಂಜನಾ ಉದ್ಯಮವು ಮುಂದಿನ 10 ವರ್ಷಗಳಲ್ಲಿ ಪ್ರಸ್ತುತ ಇರುವ $28 ಬಿಲಿಯನ್‌ನಿಂದ $100 ಬಿಲಿಯನ್‌ಗೆ ತಲುಪಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಮುಂಬೈನಲ್ಲಿ ನಡೆದ WAVE ಸಂವಾದ 2025ರಲ್ಲಿ ಮುಕೇಶ್ ಅಂಬಾನಿ ಭಾರತದ ಮಾಧ್ಯಮ ಹಾಗೂ ಮನರಂಜನಾ ಕ್ಷೇತ್ರದ ಬೆಳವಣಿಗೆ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮುಂದಿನ ದಶಕದ ಹೊತ್ತಿಗೆ ಭಾರತೀಯ ಮಾಧ್ಯಮ ಮತ್ತು ಮನರಂಜನಾ ಉದ್ಯಮವು ನಾಲ್ಕು ಪಟ್ಟು ಬೆಳವಣಿಗೆ ದರವನ್ನು ಸಾಧಿಸಬಹುದು ಎಂದು ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅಭಿಪ್ರಾಯ ಪಟ್ಟಿದ್ದಾರೆ. ಅಂದರೆ ಅದು 100 ಶತಕೋಟಿ ಅಮೆರಿಕನ್ ಡಾಲರ್ ಗಿಂತ ಹೆಚ್ಚಿನ ಮೊತ್ತವನ್ನು ತಲುಪಬಹುದು. ಸದ್ಯಕ್ಕೆ ಈ ಮಾರುಕಟ್ಟೆಯ ಮೌಲ್ಯ ಸುಮಾರು 28 ಬಿಲಿಯನ್ ಅಮೆರಿಕನ್ ಡಾಲರ್ ಆಗಿದೆ. ಮುಂಬೈನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯುತ್ತಿರುವ ವರ್ಲ್ಡ್ ಶ್ರವಣ ದೃಶ್ಯ ಹಾಗೂ ಮನರಂಜನಾ ಶೃಂಗಸಭೆ 2025ರಲ್ಲಿ ಮುಕೇಶ್ ಅಂಬಾನಿ ಗುರುವಾರ ಈ ವಿಷಯ ಮಾತನಾಡಿದರು. ಭಾರತವು ಪ್ರಮುಖ ಡಿಜಿಟಲ್ ರಾಷ್ಟ್ರವಾಗಲಿದೆ : ಮುಕೇಶ್ ಅಂಬಾನಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ ಅಂಬಾನಿ, ''ಮೋದಿ ಜೀ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತವು ಪ್ರಮುಖ ಡಿಜಿಟಲ್ ರಾಷ್ಟ್ರವಾಗಿದೆ ಎಂದು ಹೇಳಿದರು. ಕಥೆ ಹೇಳುವ ಕಲೆ ಮತ್ತು ಡಿಜಿಟಲ್ ತಂತ್ರಜ್ಞಾನಗಳ ಮಿಶ್ರಣವು ಭಾರತದ ಮನರಂಜನೆ ಮತ್ತು ಸಾಂಸ್ಕೃತಿಕ ಪ್ರಭಾವ ಹಾಗೂ ವ್ಯಾಪ್ತಿಯನ್ನು ವಿಸ್ತರಿಸಿದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಗಹನವಾದ ತಂತ್ರಜ್ಞಾನಗಳ ಪರಿಕರಗಳು ಎಂದಿಗಿಂತಲೂ ಹೆಚ್ಚು ಆಕರ್ಷಕವಾಗಿಸುತ್ತವೆ. ಜೊತೆಗೆ ವಿವಿಧ ಭಾಷೆಗಳು, ದೇಶಗಳು ಮತ್ತು ಸಂಸ್ಕೃತಿಗಳಿರುವಂಥ ಕಡೆಯೂ ಪ್ರೇಕ್ಷಕರನ್ನು ತಕ್ಷಣ ತಲುಪುತ್ತವೆ. ಭಾರತದ ಸೂಪರ್-ಪ್ರತಿಭಾನ್ವಿತ ಯುವಕರು ಜಾಗತಿಕ ಮನರಂಜನಾ ಉದ್ಯಮವನ್ನು ಆಳುತ್ತಾರೆ ಎಂದು ನನಗೆ ವಿಶ್ವಾಸವಿದೆ ಎಂಬುದಾಗಿ'' ಮುಕೇಶ್ ಅಂಬಾನಿ ಹೇಳಿದರು.
