ವರದಿಗಾರರು :
ತೌಕೀರ್ ಖತೀಬ್ ||
ಸ್ಥಳ :
ಬೆಳಗಾವಿ
ವರದಿ ದಿನಾಂಕ :
23-10-2025
ಜಾರಕಿಹೊಳಿ–ಸವದಿ ವಾಗ್ದಾಳಿ ತೀವ್ರ: ಚಿದು ಸವದಿ ನೇರ ಪ್ರಹಾರ
ಬೆಳಗಾವಿ ಜಿಲ್ಲೆ, ಅಥಣಿ ತಾಲ್ಲೂಕು — ಮಾಜಿ ಉಪಮುಖ್ಯಮಂತ್ರಿ ಹಾಗೂ ಹಾಲಿ ಶಾಸಕರಾದ ಲಕ್ಷ್ಮಣ ಸವದಿ ಅವರ ಪುತ್ರ ಚಿದಾನಂದ ಸವದಿ ಅವರು ರಮೇಶ ಜಾರಕಿಹೊಳಿಯವರ ವಿರುದ್ಧ ನೇರವಾಗಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ರಮೇಶ ಜಾರಕಿಹೊಳಿ ಅವರ ತಂದೆ ಕಳ್ಳ ಬಟ್ಟಿ ಮಾರುವುದನ್ನ ಕಲಿಸಿದ್ದಾರೆ, ಆದರೆ ನಮ್ಮ ತಂದೆ ನಮಗೆ ಸಂಸ್ಕಾರ ಕಲಿಸಿದ್ದಾರೆ,” ಎಂದು ಚಿದು ಸವದಿ ತೀವ್ರ ಶಬ್ದಗಳಲ್ಲಿ ಪ್ರತಿಕ್ರಿಯಿಸಿದರು.
ಅವರು ಮುಂದುವರೆದು, “ರಮೇಶ ಜಾರಕಿಹೊಳಿ ಅಥಣಿಗೆ ಬಂದ್ರೆ ಮುಚ್ಚಕೊಂಡು ಬಗಲ ಬಚ್ಚಾಗಳ ಜೊತೆ ಬಿಟ್ಟಿ ಉಪ್ಪಿಟ್ಟ ಚಹಾ ತಿಂದು ಮುಚ್ಚಕೊಂಡು ಊರಿಗೆ ಹೋಗಬೇಕು. ನಮ್ಮ ತಂದೆ ವಿಷಯಕ್ಕೆ ಬಂದ್ರೆ ಅದಕ್ಕಿಂತ ಕೆಟ್ಟ ಭಾಷೆ ನನಗೂ ಬರುತ್ತೆ,” ಎಂದು ಹೇಳಿದರು.
ಈ ಹೇಳಿಕೆಗಳೊಂದಿಗೆ ಸವದಿ–ಜಾರಕಿಹೊಳಿ ವಾಗ್ದಾಳಿ ಹೊಸ ತಿರುವು ಪಡೆದಿದೆ.
