ವರದಿಗಾರರು :
ಮೀನಾಕ್ಷಿ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
18-03-2025
ರೆಬೆಲ್ ಸ್ಟಾರ್ ಅಂಬರೀಶ್ ಮೊಮ್ಮಗನ ನಾಮಕರಣದ ಕಾರ್ಯಕ್ರಮ !
ರೆಬೆಲ್ ಸ್ಟಾರ್ ಅಂಬರೀಶ್ ಮೊಮ್ಮಗನ ನಾಮಕರಣದ ಕಾರ್ಯಕ್ರಮವು ಮಾ.16ರಂದು ಅದ್ಧೂರಿಯಾಗಿ ಜರುಗಿದೆ. ಸಂಭ್ರಮದ ಸುಂದರ ಫೋಟೋಗಳನ್ನು ಅಂಬರೀಶ್ ಸೊಸೆ ಅವಿವ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರಿನ ಖಾಸಗಿ ರೆಸಾರ್ಟ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿಷೇಕ್ ಅಂಬರೀಶ್ ಮತ್ತು ಅವಿವ ಪುತ್ರನಿಗೆ ‘ರಾಣಾ ಅಮರ್ ಅಂಬರೀಶ್’ ಎಂದು ಹೆಸರಿಟ್ಟಿದ್ದಾರೆ.ಇನ್ನೂ ಅಂಬರೀಶ್ ಅವರ ಮೂಲ ಹೆಸರು ಅಮರನಾಥ್. ಸಿನಿಮಾ ಇಂಡಿಸ್ಟ್ರೀಗೆ ಎಂಟ್ರಿ ಕೊಟ್ಮೇಲೆ ಅಂಬರೀಶ್ ಎಂದು ಅವರು ಬದಲಿಸಿದ್ದರು.
ಇನ್ನೂ ಮಗನ ನಾಮಕರಣದ ಸಂಭ್ರಮದ ಫೋಟೋಗಳನ್ನು ಅವಿವ ಶೇರ್ ಮಾಡಿ ‘ರಾಣಾ ಅಮರ್ ಅಂಬರೀಶ್’ ಎಂದು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
