ವರದಿಗಾರರು :
ನಜ್ರುಲ್ಲಾ ಬೇಗ್ , ||
ಸ್ಥಳ :
ತುಮಕೂರು
ವರದಿ ದಿನಾಂಕ :
27-10-2025
ಬೆಂಗಳೂರಲ್ಲಿ ಸಲ್ಮಾ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಬೆಂಗಳೂರಿನ ತಿಲಕ್ ನಗರದ ಸಲ್ಮಾ ಕೊಲೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲಾಗಿದೆ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಸುಬ್ರಮಣಿ ಮತ್ತು ಸೆಂತಿಲ್ ಎಂಬುವವರು ಸಲ್ಮಾಳನ್ನು ಕೊಲೆ ಮಾಡಿದ್ದಾರೆ, ಸಲ್ಮಾ ಮೊದಲು ಸುಬ್ರಮಣಿ ಮತ್ತು ಸೆಂತಿಲ್ ಇಬ್ಬರೊಂದಿಗೂ ಸಲಿಗೆ ಯಿಂದ ಸಂಬಂಧದಲ್ಲಿದ್ದಳು ಎನ್ನಲಾಗಿದೆ, ಆದರೆ ಬಳಿಕ ಆಕೆ ಬೇರೊಬ್ಬರೊಂದಿಗೆ ಸಂಬಂಧ ಬೆಳೆಸಿದ್ದರಿಂದ ಕೋಪಗೊಂಡ ಸುಬ್ರಮಣಿ ಮತ್ತು ಸೆಂತಿಲ್ ಆಕೆಯನ್ನು ಕೊಲೆ ಮಾಡಿದ್ದಾರೆ, ಇದೀಗ ಸುಬ್ರಮಣಿ ಮತ್ತು ಸೆಂತಿಲ್ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ
