ವರದಿಗಾರರು :
ಎಂ ಬಸವರಾಜ್ , ||
ಸ್ಥಳ :
ವಿಜಯನಗರ
ವರದಿ ದಿನಾಂಕ :
27-10-2025
ಆಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ಉನ್ನತೀಕರಣ ಭೂಮಿ ಪೂಜೆ
ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಆಲೂರು ಗ್ರಾಮದಲ್ಲಿ 2024–25ನೇ ಸಾಲಿನ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಿಂದ (₹2 ಕೋಟಿ) ಪ್ರಾಥಮಿಕ ಆರೋಗ್ಯ ಕೇಂದ್ರದ ಉನ್ನತೀಕರಣ ಭೂಮಿಪೂಜೆ 25-10-2025 ರಂದು ನಡೆದಿದ್ದು, ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್ ಎನ್.ಟಿ. ಅಧ್ಯಕ್ಷತೆ ವಹಿಸಿದರು.
ಮಾನ್ಯ ಶಾಸಕರು ಆರೋಗ್ಯ ಸುಧಾರಣೆಗೆ ಆದ್ಯತೆ ನೀಡುವ ಉದ್ದೇಶವನ್ನು ಹಂಚಿಕೊಂಡು, ಸರ್ಕಾರದ ಅನುದಾನದಲ್ಲಿ ಕಟ್ಟಡದ ಉನ್ನತೀಕರಣವನ್ನು ಭೂಮಿಪೂಜೆಯ ಮೂಲಕ ಆರಂಭಿಸಲಾಗಿದೆ ಎಂದರು. ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತಿ ಸದಸ್ಯರು, ಮಾಜಿ ಅಧ್ಯಕ್ಷರು, ಸ್ಥಳೀಯ ಮುಖಂಡರು, ನಾಗರಿಕರು ಹಾಗೂ ಧಾರ್ಮಿಕ ನಾಯಕರೂ ಭಾಗವಹಿಸಿದ್ದರು.
