ಲೈವ್ ಟಿವಿ ನ್ಯೂಸ್

ದಿನಾಂಕ : 21-03-2025

ಮಹೇಶ್ ಬಾಬು ಪುತ್ರ ಗೌತಮ್ ಘಟ್ಟಮನೇನಿ ನಟಿಸಿದ ಮೊದಲ ವಿಡಿಯೋ ವೈರಲ್

ವರದಿಗಾರರು : ಮೀನಾಕ್ಷಿ
ವರದಿ ಸ್ಥಳ : ಬೆಂಗಳೂರು
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 18197+

ನಟ ಮಹೇಶ್ ಬಾಬು ಅವರದ್ದು ಕಲಾವಿದರ ಕುಟುಂಬ. ಮಹೇಶ್ ಬಾಬು ತಂದೆ ಕೃಷ್ಣ ಅವರು ಸ್ಟಾರ್ ನಟನಾಗಿದ್ದರು. ಬಳಿಕ ಮಹೇಶ್ ಬಾಬು ಅವರು ಆ ಪರಂಪರೆ ಮುಂದುವರಿಸಿದರು. ಭವಿಷ್ಯದಲ್ಲಿ ಮಹೇಶ್ ಬಾಬು ಮಕ್ಕಳು ಕೂಡ ಚಿತ್ರರಂಗದಲ್ಲಿ ತೊಡಗಿಕೊಳ್ಳಲಿದ್ದಾರೆ. ಮಹೇಶ್ ಬಾಬು ಮಗಳು ಸಿತಾರಾ ಘಟ್ಟಮನೇನಿ ಈಗಾಗಲೇ ಮಾಡೆಲಿಂಗ್, ಸಂದರ್ಶನ, ಡ್ಯಾನ್ಸ್ ಮೂಲಕ ಗುರುತಿಸಿಕೊಂಡಿದ್ದಾರೆ. ಮಗ ಗೌತಮ್ ಘಟ್ಟಮನೇನಿ ನಟನೆಯ ಪಾಠ ಕಲಿಯುತ್ತಿದ್ದಾರೆ. ಈಗ ಅವರ ಒಂದು ವಿಡಿಯೋ ವೈರಲ್ ಆಗಿದೆ. ಅದರಲ್ಲಿ ಗೌತಮ್ ನಟನೆ ನೋಡಿ ಜನರು ಕಮೆಂಟ್ ಮಾಡುತ್ತಿದ್ದಾರೆ. ಯುವತಿಯೊಬ್ಬಳ ಜೊತೆ ರೆಸ್ಟೋರೆಂಟ್ನಲ್ಲಿ ಕುಳಿತು ಮಾತನಾಡುತ್ತಿರುವ ದೃಶ್ಯದಲ್ಲಿ ಗೌತಮ್ ಘಟ್ಟಮನೇನಿ ನಟಿಸಿದ್ದಾರೆ. ಈ ವೇಳೆ ಯುವತಿಯ ಜೊತೆ ಜಗಳ ಆಗುತ್ತದೆ. ಈ ದೃಶ್ಯದಲ್ಲಿ ನಟಿಸಿದ ಅವರನ್ನು ಕಂಡು ಕೆಲವರಿಗೆ ಇಷ್ಟ ಆಗಿದೆ. ಆದರೆ ಇನ್ನೂ ಕೆಲವರು ಟ್ರೋಲ್ ಮಾಡಿದ್ದಾರೆ. ಇದು ಏನೆಂಬುದೇ ಅರ್ಥ ಆಗಿಲ್ಲ ಎಂದು ಕೂಡ ಕೆಲವರು ಹೇಳಿದ್ದಾರೆ.

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand