ವರದಿಗಾರರು :
ಮೖಬೂಬಬಾಷ ಮನಗೂಳಿ ||
ಸ್ಥಳ :
ತಾಳಿಕೋಟಿ
ವರದಿ ದಿನಾಂಕ :
20-10-2025
ಮುಂದುವರಿದ ಅನಿರ್ದಿಷ್ಟ ಧರಣಿ
ಬಸವನಬಾಗೇವಾಡಿ: ತಾಲೂಕಿನ. ಕುದರಿಸಾಲವಾಡಗಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಅಗಲೀಕರಣ ನೆಪದಲ್ಲಿ ಕೆಲ ನಿವಾಸಿಗಳ ಸ್ವಂತ ಮನೆಗಳನ್ನು ಸಾಂಸ್ಕೃತಿಕ ಕಟ್ಟಡಗಳನ್ನು ಏಕಾಏಕಿ ನೆಲಸಮ ಕ್ರಮ ವಿರೋಧಿಸಿ ಬಸವನ ಬಾಗೇವಾಡಿ ಪಟ್ಟಣದ ಮಿನಿವಿಧಾನ ಸೌಧ ಮುಂಭಾಗದಲ್ಲಿ ಆಯೋಜಿಸಿದ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಪ್ರಭುಗೌಡ ಲಿಂಗದಳ್ಳಿ ಅವರು ಭೇಟಿ ನೀಡಿ ಮಾತನಾಡುತ್ತಾ ಮನೆ ಕಳೆದು ಕೊಂಡಿರುವ ನಿರಾಶಿತರಿಗೆ ನ್ಯಾಯ ಸಿಗದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಅಂತ ಎಚ್ಚರಿಕೆ ನೀಡಿದರು. ಇದೇ ಸಮಯದಲ್ಲಿ ರೈತ ಸಂಘದ ಪ್ರಧಾನ ಕಾರ್ಯದರ್ಶಿಯಾದ ಅರವಿಂದ್ ಕುಲಕರ್ಣಿ ಅವರು ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿದರು.
ಇದೇ ಸಮಯದಲ್ಲಿ ಅಶೋಕ್ ಗೌಡ ಪಾಟೀಲ್ ಗುರುರಾಜ್ ಗುಡಿಮನಿ ನಜೀರ್ ಅಹ್ಮದ್ ಗುಡ್ನಾಳ ಸೋಮಪ್ಪ ವಡ್ಡರ್ ಯಮನೂರಿ ಚಲವಾದಿ ಬಾಬು ನದಾಫ್ ಮಲ್ಲುಗೌಡ ಪಾಟೀಲ್. ಇನ್ನೂ ಅನೇಕ ರೈತ ಮುಖಂಡರು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದಾರೆ
