ವರದಿಗಾರರು :
ಶ್ರೀನಿವಾಸ್ ಹೆಚ್ ||
ಸ್ಥಳ :
ತುಮಕೂರು
ವರದಿ ದಿನಾಂಕ :
20-10-2025
ಸಹಕಾರ ಕ್ಷೇತ್ರದಲ್ಲಿ ಮಾದರಿ ಕಾಯ್ದೆ – ಶಾಸಕ ಕೆ.ಎನ್. ರಾಜಣ್ಣ
ತುಮಕೂರು: ಸಹಕಾರ ಕ್ಷೇತ್ರದಲ್ಲಿ ದೇಶಕ್ಕೆ ಮಾದರಿ ಆಗುವಂತಹ ಹೊಸ ಕಾಯ್ದೆ ಜಾರಿಯಾಗಿದೆ ಎಂದು ಮಾಜಿ ಸಹಕಾರ ಸಚಿವ ಮತ್ತು ಶಾಸಕ ಕೆ.ಎನ್. ರಾಜಣ್ಣ ಹೇಳಿದರು. ತಾವು ಸಚಿವರಾಗಿದ್ದಾಗ ರೂಪಿಸಿದ ಈ ಕಾಯ್ದೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದ ಬಳಿಕ ಅದರ ಮಹತ್ವ ಜನರಿಗೆ ಸ್ಪಷ್ಟವಾಗಲಿದೆ ಎಂದರು. ಸಹಕಾರ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವವರು ತಮ್ಮ ಆಸ್ತಿ ವಿವರ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಹೇಳಿದರು. ಹಾಲು ಉತ್ಪಾದಕರ, ಕೃಷಿ ಸೇವಾ ಸಹಕಾರ ಸಂಘಗಳು, ಡಿಸಿಸಿ ಹಾಗೂ ಅಪೆಕ್ಸ್ ಬ್ಯಾಂಕ್‌ಗಳ ಅಧ್ಯಕ್ಷ–ಉಪಾಧ್ಯಕ್ಷರ ಸ್ಥಾನಗಳಿಗೆ ಮೀಸಲಾತಿ ಕಲ್ಪಿಸಲಾಗಿದೆ. ಲೆಕ್ಕಪರಿಶೋಧನೆ ವಿಧಾನದಲ್ಲೂ ಬದಲಾವಣೆ ತರಲಾಗಿದೆ ಎಂದು ತಿಳಿಸಿದರು. ಸರ್ಕಾರದ ನೆರವು ಪಡೆಯುವ ಖಾಸಗಿ ಸಂಸ್ಥೆಗಳಿಗೂ ಮೂವರು ನಾಮನಿರ್ದೇಶನ ಕಡ್ಡಾಯವಾಗಿದ್ದು, ಎಸ್‌ಸಿ, ಎಸ್‌ಟಿ ಹಾಗೂ ಇತರ ವರ್ಗದವರ ಪ್ರತಿನಿಧಿಯನ್ನು ಒಳಗೊಳ್ಳಬೇಕೆಂದು ರಾಜಣ್ಣ ಮಾಹಿತಿ ನೀಡಿದರು.
