ವರದಿಗಾರರು :
ಫಯಾಜ್ ತೇಲಿ ||
ಸ್ಥಳ :
.ಬಾಗಲಕೋಟೆ,
ವರದಿ ದಿನಾಂಕ :
28-10-2025
ಅಹಿಂದ ನಾಯಕತ್ವ, ಸಿಎಂ ಗಾದಿಗೆ ಸಂಬಂಧವಿಲ್ಲ: ಸತೀಶ್ ಜಾರಕಿಹೊಳಿv
ಜಾತ್ಯತೀತ ಜನತಾದಳದ ಕಾಲದಿಂದಲೂ ಅಹಿಂದ ಭಾಗವಾಗಿದ್ದೇವೆ. ಅಹಿಂದ ನಾಯಕತ್ವಕ್ಕೂ, ಮುಖ್ಯಮಂತ್ರಿ ಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾಯಕತ್ವ ಬದಲಾವಣೆ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ, ಹೈಕಮಾಂಡ್ ಮಾತ್ರ ನಿರ್ಧಾರ ಮಾಡುತ್ತದೆ. ನಾನು ಸಿಎಂ ಸ್ಥಾನಕ್ಕೆ ಸಿದ್ಧನಾಗುವ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯ ಅವರು ಗಟ್ಟಿಯಾದ ನಾಯಕರು; ಅವರು ಐದು ವರ್ಷ ಸಿಎಂ ಆಗಿಯೇ ಮುಂದುವರೆಯುತ್ತಾರೆ" ಎಂದರು.
ಡಿ.ಕೆ. ಶಿವಕುಮಾರ್ ಅವರಿಗೆ ಸಿಎಂ ಸ್ಥಾನಕ್ಕೆ ಆಸೆ ಇರುವುದು ತಪ್ಪಲ್ಲ, ಆದರೆ ಈಗ ಸಿದ್ದರಾಮಯ್ಯರೇ ಸಿಎಂ ಎಂದು ಸ್ಪಷ್ಟಪಡಿಸಿದರು.
ಅದೇ ವೇಳೆ, "ದಲಿತ ಮುಖ್ಯಮಂತ್ರಿಗೆ ಅವಕಾಶ ಬರುವವರೆಗೆ ಕಾಯಬೇಕು. ಈಗ ಅಂತಹ ಪರಿಸ್ಥಿತಿ ಇಲ್ಲ. ನವೆಂಬರ್ ಕ್ರಾಂತಿ ನಡೆಯುವುದಿಲ್ಲ; ಹೈಕಮಾಂಡ್ ಅದನ್ನು ಅನುಮತಿಸುವುದಿಲ್ಲ" ಎಂದರು.
"ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ, ಶರದ್ ಪವಾರ್ ಇಬ್ಬರಂತಹ ನಾಯಕರು ಒಬ್ಬರೇ ಆಗಿದ್ದಾರೆ. ಅವರಂತೆ ಮತ್ತೊಬ್ಬರು ಹುಟ್ಟುವುದು ಅಸಾಧ್ಯ" ಎಂದು ಅವರು ವ್ಯಂಗ್ಯವಾಡಿದರು.
ಅಂತೆಯೇ, “ಯತೀಂದ್ರ ಸಿದ್ದರಾಮಯ್ಯ ಅವರು ಯಾವುದೇ ಸ್ಥಾನ ಕುರಿತಾಗಿ ನೇರವಾಗಿ ಹೇಳಿಲ್ಲ. 2028ರ ಚುನಾವಣೆಯ ಬಳಿಕದ ಸ್ಥಿತಿಗತಿ ನೋಡಿಕೊಂಡು ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ” ಎಂದರು
