ವರದಿಗಾರರು :
ಡಾ. ಜ್ಯೋತಿ ||
ಸ್ಥಳ :
ತುಮಕೂರು
ವರದಿ ದಿನಾಂಕ :
30-10-2025
ತಿಪಟೂರು: ಪದವೀಧರರ ಮತದಾರರ ನೋಂದಣಿ ವೇಗ ಪಡೆಯಲಿ – ತೀರ್ಥ ಕುಮಾರ್
ತಿಪಟೂರು: ಪದವೀಧರರ ಕ್ಷೇತ್ರದ ಚುನಾವಣೆಗೆ ಈ ಹಿಂದೆ ಹೆಸರು ಸೇರಿಸಿದ್ದರೂ ಮತ್ತೆ ನೋಂದಣಿ ಅಗತ್ಯವಿದ್ದು, ಎಲ್ಲರೂ ತಪ್ಪದೆ ಹೊಸದಾಗಿ ನೋಂದಾಯಿಸಿಕೊಳ್ಳಬೇಕೆಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ತೀರ್ಥ ಕುಮಾರ್ ತಿಳಿಸಿದ್ದಾರೆ.
ತಿಪಟೂರು ತಾಲೂಕು ಸೇರಿದಂತೆ ತುಮಕೂರು ಜಿಲ್ಲೆಯಾದ್ಯಂತ ಪದವೀಧರರ ನೋಂದಣಿ ಪ್ರಕ್ರಿಯೆ ಕುಂಠಿತಗೊಂಡಿದೆ. ಜಿಲ್ಲೆಯಾದ್ಯಂತ ಇದುವರೆಗೆ ಕೇವಲ ಶೇಕಡಾ 25 ರಿಂದ 35ರಷ್ಟು ಮಂದಿ ಮಾತ್ರ ನೋಂದಾಯಿಸಿಕೊಂಡಿರುವುದಾಗಿ ಅವರು ಹೇಳಿದರು.
ನವೆಂಬರ್ 6 ನೋಂದಣಿಗೆ ಕೊನೆಯ ದಿನವಾಗಿರುವುದರಿಂದ, ಎಲ್ಲಾ ಪದವೀಧರರು ತಕ್ಷಣ ತಮ್ಮ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ಅವರು ಮನವಿ ಮಾಡಿದರು. ಜೊತೆಗೆ, ಚುನಾವಣಾ ಆಯೋಗವು ಕೊನೆಯ ದಿನಾಂಕವನ್ನು ವಿಸ್ತರಿಸುವ ಕುರಿತು ಪರಿಗಣಿಸಬೇಕೆಂದು ತೀರ್ಥ ಕುಮಾರ್ ವಿನಂತಿಸಿದರು.
