ವರದಿಗಾರರು :
ಸಿಂಚನ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
25-10-2025
ಅಶ್ವಿನಿ ಗೌಡ ಅವರಿಂದ ಆಕ್ಷೇಪಾರ್ಹ ಪದ ಬಳಕೆ ಡಿಲೀಟ್ ಮಾಡದ ವಾಹಿನಿ ಮೇಲು ಕೇಸ್
ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಅವರು ಸಹ ಸ್ಪರ್ಧೆ ರಕ್ಷಿತವಾಗಿ ನೇರವಾಗಿ ಎಸ್ ಕೆಟಗರಿ (ಸ್ಲಂ ಅಥವಾ ಎಸ್ಸಿ ಎಸ್ಟಿ ಎಂದು ಸೂಚಿಸುವ )ಪದದಲ್ಲಿ ಬೈದಿದ್ದಾರೆ. ಇದು ಜಾತಿ ನಿಂದನೆ ಮತ್ತು ವೈಯಕ್ತಿಕ ನಿಂದನೆಯಾಗಿದೆ ಈ ಹೇಳಿಕೆಗೆ ಅಶ್ವಿನಿ ಸ್ಪಷ್ಟನೆ ನೀಡಬೇಕು ಎಂದು ದೂರು ದಾಖಲಾಗಿದೆ ಈ ಪದಗಳ ಬಳಕೆಯನ್ನು ಪ್ರಸಾರ ಮಾಡಿದ ಕಾರಣಕ್ಕೆ ಕಲರ್ ಚಾನೆಲ್ ನ ಬಿಗ್ ಬಾಸ್ ಹೆಡ್ ಪ್ರಶಾಂತ್ ನಾಯಕ್ ಕ್ಲಸ್ಟರ್ ಹೆಡ್ ಸುಷ್ಮಾ ಅಥವಾ ಶೋ ಡೈರೆಕ್ಟರ್ ಪ್ರಕಾಶ್ ಅವರ ಮೇಲೆಯೂ ಬಿಡದಿ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಅಶ್ವಿನಿ ಗೌಡ ಸೇರಿದಂತೆ ಎಲ್ಲರೂ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ ಎನ್ನಲಾಗಿದೆ
