ವರದಿಗಾರರು :
ಮೀನಾಕ್ಷಿ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
18-03-2025
ಪುಷ್ಪ 2’ ನಿರ್ದೇಶಕನ ಜೊತೆ ಶಾರುಖ್ ಖಾನ್ ಸಿನಿಮಾ !
‘ಪುಷ್ಪ 2’ ಸಿನಿಮಾಗಳ ಸಕ್ಸಸ್ ಬಳಿಕ ಬಾಲಿವುಡ್ನ ಸ್ಟಾರ್ ನಟನಿಗೆ ನಿರ್ದೇಶನ ಮಾಡಲು ಸುಕುಮಾರ್ ಸಜ್ಜಾಗಿದ್ದಾರೆ. ಬಾಲಿವುಡ್ನ ಟಾಪ್ ನಟರಲ್ಲಿ ಒಬ್ಬರಾಗಿರುವ ಶಾರುಖ್ ಖಾನ್ಗೆ ಸುಕುಮಾರ್ ಡೈರೆಕ್ಷನ್ ಮಾಡಲಿದ್ದಾರೆ ಎನ್ನಲಾದ ಸುದ್ದಿಯೊಂದು ಚರ್ಚೆಗೆ ಗ್ರಾಸವಾಗಿದೆ. ಗ್ರಾಮೀಣ ಭಾಗದ ರಾಜಕೀಯ ಕುರಿತಾದ ಕಥೆಯನ್ನು ಶಾರುಖ್ ಮೂಲಕ ತೋರಿಸಲು ಸುಕುಮಾರ್ ತಯಾರಿ ಮಾಡಿಕೊಳ್ತಿದ್ದಾರೆ ಎನ್ನಲಾಗಿದೆ. ಕಿಂಗ್ ಖಾನ್ ಶಾರುಖ್ ಕೂಡ ಕಥೆ ಇಷ್ಟವಾಗಿ ನಿರ್ದೇಶಕನಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರ ಕಡೆಯಿಂದ ಅಧಿಕೃತ ಅಪ್ಡೇಟ್ ಸಿಗುವವರೆಗೂ ಕಾದುನೋಡಬೇಕಿದೆ.
