ವರದಿಗಾರರು :
ಸಿಂಚನ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
23-10-2025
ಬಲಮುರಿಯಲ್ಲಿಈಜಲು ಹೋಗಿದ್ದ ಯುವಕ ನೀರು ಪಾಲು
ಮೈಸೂರು, ಬುಧವಾರ — ಎಸ್.ಡಿ. ಕೋಟೆ ತಾಲ್ಲೂಕಿನ ವ್ಯಾಪ್ತಿಯ ಬಳಮುರಿ ಕಾವೇರಿಯ ನದಿಯಲ್ಲಿ ಈಜಲು ಹೋಗಿದ್ದ ಯುವಕನೊಬ್ಬ ನೀರು ಪಾಲಾದ ಘಟನೆ ಬುಧವಾರ ಬೆಳಕಿಗೆ ಬಂದಿದೆ. ಮೃತನನ್ನು ಜೆ.ಬಿ. ನಗರದ ನಿವಾಸಿ ನಿವಾನ್ (20) ಎಂದು ಗುರುತಿಸಲಾಗಿದೆ. ಸ್ನಾನಕ್ಕಾಗಿ ನದಿಗೆ ಇಳಿದಿದ್ದ ಅವನು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಕೆ.ಆರ್.ಎಸ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ
