ವರದಿಗಾರರು :
ಮೀನಾಕ್ಷಿ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
24-03-2025
ಯುವ ಸ್ಪಿನ್ನರ್ ವಿಘ್ನೇಶ್ ಪುತೂರ್ ಯಾರು ?
ಮುಂಬೈ ಇಂಡಿಯನ್ಸ್ ಈ ವರ್ಷವೂ ಕ್ರಿಕೆಟ್ ಲೋಕಕ್ಕೆ ಹೊಸ ಪ್ರತಿಭೆಯನ್ನು ಕೊಡುವಲ್ಲಿ ಯಶಸ್ವಿಯಾಗಿದೆ. ಪ್ರತಿ ಬಾರಿಯೂ ಮುಂಬೈ ಫ್ರಾಂಚೈಸಿ, ಸ್ಥಳೀಯ ಕ್ಲಬ್ಗಳಲ್ಲಿ ಆಡುವ ಯುವ ಆಟಗಾರರನ್ನು ಗುರುತಿಸುವ ಕೆಲಸ ಮಾಡುತ್ತಿದೆ. ಅದರಂತೆ ವರ್ಷದ ತನ್ನ ಮೊದಲ ಪಂದ್ಯದಲ್ಲೇ, ಯಂಗ್ಸ್ಟಾರ್ನ ಪರಿಚಯಿಸಿದೆ.ವಿಘ್ನೇಶ್ ಪುತೂರ್. ಸದ್ಯ ಐಪಿಎಲ್ನಲ್ಲಿ ಈ ಹೆಸರು ಸೆನ್ಸೇಷನ್ ಸೃಷ್ಟಿಸಿದೆ. 24 ವರ್ಷದ ವಿಘ್ನೇಶ್ ಮೂಲತಃ ಕೇರಳದವರು. ಎಡಗೈ ಸ್ಪಿನ್ನರ್ ಆಗಿದ್ದಾರೆ. ಕೇರಳ ಪ್ರೀಮಿಯರ್ ಲೀಗ್ನಲ್ಲಿ ಅಳಪ್ಪೆ ರಿಪಲ್ಸ್ ಪರ ಆಡುತ್ತಿದ್ದರು. ಮೂರು ಪಂದ್ಯಗಳಲ್ಲಿ ಅವರು ಕೇವಲ 2 ವಿಕೆಟ್ ಕಿತ್ತಿದ್ದರು.
