ವರದಿಗಾರರು :
ರಾಮಕೃಷ್ಣೇಗೌಡ ||
ಸ್ಥಳ :
ಹುಣಸೂರು
ವರದಿ ದಿನಾಂಕ :
11-10-2025
ಪಿ.ಡಿ.ಒ ಮತ್ತು ಅಧ್ಯಕ್ಷರ ವಿರುದ್ಧ ಪ್ರತಿಭಟನೆ: ತಾಲ್ಲೂಕು ಪಂಚಾಯಿತಿ ಅಧಿಕಾರಿ ಮಧ್ಯಪ್ರವೇಶಿಸಿ ರೆಸಲ್ಯೂಷನ್ �
ಹುಣಸೂರು ತಾಲ್ಲೂಕಿನ ಆಸ್ಪತ್ರೆ ಕಾವಲ್ ಗ್ರಾಮ ಪಂಚಾಯಿತಿಯಲ್ಲಿ ಸದಸ್ಯರಾದ ರಮೇಶ್ ಅವರ ವಿರುದ್ಧ ಹಕ್ಕುಚ್ಯುತಿ ಮಂಡನೆ ನಡೆದ ಬಳಿಕ, ಪಿ.ಡಿ.ಒ ಮತ್ತು ಪಂಚಾಯತ್ ಅಧ್ಯಕ್ಷರ ವಿರುದ್ಧ ಕೆಲವು ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದರು. ಧರಣಿ ಸತ್ಯಾಗ್ರಹ ನಡೆಯುವ ಸಂದರ್ಭ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಂಗಯ್ಯನವರು ಮಧ್ಯಪ್ರವೇಶಿಸಿ, ಕಂಪ್ಯೂಟರ್‌ನಲ್ಲಿ ರೆಸಲ್ಯೂಷನ್ ಟೈಪ್ ಮಾಡುವಾಗ ಅಜಾಗರೂಕತೆಯಿಂದ ತಪ್ಪು ಆಗಿದೆಯೆಂದು ತಿಳಿದು ಅದು ತಿದ್ದುಪಡಿ ಆಗಬೇಕೆಂದು ಪಿ.ಡಿ.ಒ ಹಾಗೂ ಅಧ್ಯಕ್ಷರಿಗೆ ತಿಳಿಸಿದರು.
ಅವರು ಸರ್ಕಾರದ ಅಧಿಕಾರ ವಲಯದಲ್ಲಿ ಪ್ರಮಾಣ ಪತ್ರ ನೀಡುವ ಅಥವಾ ತಪ್ಪಾಗಿ ದಾಖಲೆ ಮಾಡುವಂತಹ ಕಾರ್ಯಗಳು ನಡೆಯಬಾರದೆಂದು ಎಚ್ಚರಿಕೆ ನೀಡಿದರು. ಮುಂದಿನ ದಿನಗಳಲ್ಲಿ ಸದಸ್ಯರ ವಿರುದ್ಧ ತಪ್ಪು ಕ್ರಮ ಕೈಗೊಳ್ಳಬಾರದೆಂದು ಹಾಗೂ ಪರಸ್ಪರ ಸಹಕಾರದಿಂದ ಕೆಲಸ ನಿರ್ವಹಿಸಬೇಕೆಂದು ಸಲಹೆ ನೀಡಿದರು. ಜೊತೆಗೆ, ಸದಸ್ಯರಾದ ರಮೇಶ್ ಅವರಿಗೆ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಹಾಜರಾಗುವಂತೆ ಸೂಚಿಸಿ ಪ್ರತಿಭಟನೆ ಕೈಬಿಡುವಂತೆ ಹೇಳಿದರು.
