ವರದಿಗಾರರು :
ಹೆಚ್ ಎಂ ಹವಾಲ್ದಾರ್ ||
ಸ್ಥಳ :
ಬಾಗಲಕೋಟೆ
ವರದಿ ದಿನಾಂಕ :
20-10-2025
ದೀಪಾವಳಿ ದೀಪದಿಂದ ಅವಾಂತರ!
ಬಾಗಲಕೋಟೆ ತಾಲ್ಲೂಕಿನ ಗದ್ದನಕೇರಿ ಕ್ರಾಸ್‌ನಲ್ಲಿ ಮನೆ ಬಾಗಿಲು ಎದುರು ಹಚ್ಚಿದ ದೀಪದಿಂದ ಬೆಂಕಿ ಹೊತ್ತಿಕೊಂಡು ಏಳು ಜನರಿಗೆ ಜಳ ತಗುಲಿ ಗಾಯಗಳು ಸಂಭವಿಸಿದ ಘಟನೆ ನಡೆದಿದೆ. ಬೋರ್ವೆಲ್ ಕೆಲಸ ಮಾಡುತ್ತಿದ್ದ ರಾಜೇಂದ್ರ ತಪಶೆಟ್ಟಿ ಅವರ ಕುಟುಂಬ ಮನೆ ಎದುರು ದೀಪ ಹಚ್ಚಿದ್ದರು. ಮನೆ ಎದುರು ಬಿದ್ದಿದ್ದ ಆಯಿಲ್ ಮತ್ತು ಗ್ರೀಸ್ ಗೆ ದೀಪದ ಬೆಂಕಿ ತಗುಲಿ ಬೆಂಕಿ ವ್ಯಾಪಿಸಿದೆ. ಬೆಂಕಿ ಮೊದಲಿಗೆ ಎರಡು ಬೈಕ್‌ಗಳನ್ನು ಸುಟ್ಟು, ನಂತರ ಮನೆಗೂ ವ್ಯಾಪಿಸಿ ಭಾರೀ ನಷ್ಟ ಉಂಟುಮಾಡಿದೆ. ಅಡುಗೆಮನೆಯ ಸಿಲಿಂಡರ್ ಸೋರಿಕೆ ಯಿಂದ ಬೆಂಕಿಯ ತೀವ್ರತೆ ಹೆಚ್ಚಾಗಿದೆ. ತಪಶೆಟ್ಟಿ ಕುಟುಂಬ ಹೊರಗೆ ಓಡಿ ಬಂದು ಪ್ರಾಣಾಪಾಯದಿಂದ ಪಾರಾದರೆ, ಮೇಲ್ಮಹಡಿಯಲ್ಲಿ ವಾಸವಿದ್ದ ಉಮೇಶ್ ಮೇಟಿ ಅವರ ಕಟ್ಟಡದ ನಿವಾಸಿಗಳು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ. ಕಲಾದಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೀಪದ ಬೆಳಕು ಕತ್ತಲೆಯ ಬದಲು ಕಾಟ ತಂದ ದುರ್ಘಟನೆ!
