ವರದಿಗಾರರು :
ಹುಲಗಪ್ಪ ಎಮ್ ಹವಾಲ್ದಾರ ||
ಸ್ಥಳ :
ಯಾದಗಿರಿ
ವರದಿ ದಿನಾಂಕ :
20-10-2025
ಸುರಪುರ ತಾಲೂಕಿನಲ್ಲಿ ಸಂಪೂರ್ಣ ಹದಗೆಟ್ಟಿರುವ ರಸ್ತೆಗಳು
ಸುರಪುರ ತಾಲೂಕಿನಲ್ಲಿ ಸಂಪೂರ್ಣ ಹದಗೆಟ್ಟಿರುವ ರಸ್ತೆಗಳು ಮೂಲಭೂತ ಸೌಕರ್ಯಗಳಲ್ಲಿ ಒಂದಾಗಿದ್ದ ರಸ್ತೆಯು ಸುರಪುರ ತಾಲೂಕಿನಲ್ಲಿ ಸಂಪೂರ್ಣ ಹದಗೆಟ್ಟೊಗಿದೆ. ಅಭಿವೃದ್ದಿಯಾಗದ ರಸ್ತೆಗಳಿಂದ ನಿತ್ಯ ವಾಹನ ಸವಾರರ ಪರದಾಟ ಯಾರು ಕೇಳದಂತಾಗಿದೆ ರಾತ್ರಿ ಹೊತ್ತಿನಲ್ಲಿ ಹಾಗೂ ಮಳೆಯ ಸಂದರ್ಭದಲ್ಲಿ ಎಷ್ಟೋ ವಾಹನಗಳು ಗುಂಡಿಗೆ ಬಿದ್ದು ಅಪಘಾತ ಉಂಟಾಗಿದೆ. ನಿತ್ಯ ವಾಹನ ಸವಾರರು ಅಧಿಕಾರಿಗಳಿಗೆ ಮನದಲ್ಲಿ ಬೈಯುತ್ತಾ ವಾಹನವನ್ನು ಸಂಚಾರ ಮಾಡುವಂತೆಯಾಗಿದೆ. ಪ್ರಮುಖ ರಸ್ತೆಗಳಲ್ಲಿ ನಿತ್ಯ ಸಂಚಾರ ಮಾಡುವ ಸಂಬಂಧ ಪಟ್ಟ ಅಧಿಕಾರಿಗಳು, ಗುಂಡಿಗಳು ಕಂಡಿದ್ದು ಕಾಣದಂತೆ ಸಂಚಾರ ಮಾಡುತ್ತಾರೆ. ಗುಂಡಿಗೆ ಬಿದ್ದು ವಾಹನ ಸವಾರರು ಅಪಘಾತದಲ್ಲಿ ಸಾವನ್ನೊಪ್ಪಿದರೆ ಅವರ ಮನೆಯವರಿಗೆ ಅಧಿಕಾರಿಗಳು ಜೀವ ತಂದು ಕೊಡುವುದಕ್ಕೆ ಆಗುವುದಿಲ್ಲಾ. ಸಿದ್ದಾಪುರ ರಸ್ತೆಯಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಯು ಯಾವುದೇ ಮುನ್ಸೂಚನೆ ಇಲ್ಲದೆ, ಕಾಮಗಾರಿ ಮಾಡುತ್ತಿದ್ದು ಇದರಿಂದ ವಾಹನ ಸವಾರರು ಅಪಘಾತ ಉಂಟಾಗುತ್ತದೆ. ಆ ರಸ್ತೆಯಲ್ಲಿ ಅಪಘಾತವಾದರೆ ಅದಕ್ಕೆ ನೇರ ಹೊಣೆಗಾರರು ಗುತ್ತೆದಾರರು & ಅಧಿಕಾರಿಗಳಾಗುತ್ತಾರೆ.
ಅತಿ ಶೀಘ್ರದಲ್ಲಿ ಹದಗೆಟ್ಟಿರುವ ಎಲ್ಲಾ ರಸ್ತೆಗಳನ್ನು ಸರಿಪಡಿಸಬೇಕೆಂದು ಸುರಪುರದ ಸಾಮಾಜಿಕ ಕಾರ್ಯಕರ್ತ ಸಚಿನ ಕುಮಾರ ನಾಯಕ ಆಗ್ರಹಿಸಿದರು .
