ವರದಿಗಾರರು :
ರವಿ K, ||
ಸ್ಥಳ :
ಅಥಣಿ:
ವರದಿ ದಿನಾಂಕ :
27-10-2025
ಅಥಣಿ: ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆ ಫಲಿತಾಂಶ
ಅಥಣಿ: ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆ ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬೆಂಬಲಿತ ಬಣ ಭರ್ಜರಿ ಗೆಲುವು ಸಾಧಿಸಿದೆ.
ಮಹೇಶ್ ಕುಮಠಳ್ಳಿ ಹಾಗೂ ಲಕ್ಷ್ಮಣ ಸವದಿ ಬೆಂಬಲಿತ ಅಭ್ಯರ್ಥಿಗಳ ನಡುವೆ ಕಠಿಣ ಸ್ಪರ್ಧೆ ನಡೆದಿತ್ತು. ಅಂತಿಮ ಫಲಿತಾಂಶದಲ್ಲಿ ಲಕ್ಷ್ಮಣ ಸವದಿ ಬೆಂಬಲಿತ 12 ಮಂದಿ ಅಭ್ಯರ್ಥಿಗಳು ಜಯವನ್ನು ಪಡೆದುಕೊಂಡಿದ್ದಾರೆ. ಚುನಾವಣಾ ಪೂರ್ವದಲ್ಲಿ ಬಲವಾದ ಪ್ರಚಾರ ನಡೆಸಿದ್ದ ರಾಮೇಶ್ ಜಾರಕಿಹೊಳಿ ಬಣ ಸೋಲನ್ನು ಅನುಭವಿಸಿದೆ. ಸ್ಥಳೀಯರು ಇದನ್ನು ಸ್ವಾಭಿಮಾನದ ಜಯ ಎಂದು ಕರೆದಿದ್ದಾರೆ.
