ವರದಿಗಾರರು :
ಶ್ರೀನಿವಾಸ್ ಹೆಚ್ ||
ಸ್ಥಳ :
ತುಮಕೂರು
ವರದಿ ದಿನಾಂಕ :
20-10-2025
ತುಮಕೂರಿನಲ್ಲಿ ರಾಜ್ಯ ಮಟ್ಟದ ಕಬಡ್ಡಿ: ಬೆಟ್ಟಿಂಗ್‌ನಲ್ಲಿ 500 ಕಳೆದುಕೊಂಡ ಗೃಹ ಸಚಿವ ಪರಮೇಶ್ವರ!
ತುಮಕೂರು: ಪದವಿ ಪೂರ್ವ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯ ಫೈನಲ್ ವೇಳೆ ಹಾಸ್ಯಭರಿತ ಕ್ಷಣ ಎದುರಾಯಿತು. ವಿಜಯಪುರ ತಂಡ ಗೆಲ್ಲುತ್ತದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಜೊತೆ ಬೆಟ್ಟಿಂಗ್ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು 500 ರೂಪಾಯಿ ಕಳೆದುಕೊಂಡಿದ್ದಾರೆಂದು ನಗೆಯ ಮಧ್ಯೆ ತಿಳಿಸಿದ್ದಾರೆ. ಫೈನಲ್‌ನಲ್ಲಿ ದಕ್ಷಿಣ ಕನ್ನಡ ತಂಡವು ವಿಜಯಪುರ ತಂಡವನ್ನು 36–26 ಅಂಕಗಳಿಂದ ಸೋಲಿಸಿ ಪ್ರಶಸ್ತಿ ಪಡೆದಿತು. ಪಂದ್ಯಾನಂತರ ಮಾತನಾಡಿದ ಪರಮೇಶ್ವರ ಹೇಳಿದರು, “ನಾನು 500 ಕಳೆದುಕೊಂಡೆ! ವಿಜಯಪುರ ತಂಡ ಗೆಲ್ಲುತ್ತದೆ ಎಂದು ಡಿಸಿಯೊಂದಿಗೆ ಬೆಟ್ಟಿಂಗ್ ಮಾಡಿದ್ದೆ,” ಎಂದು ನಕ್ಕು ಹೇಳಿದರು.
ರಾಜ್ಯದ 62 ತಂಡಗಳು ಭಾಗವಹಿಸಿದ್ದ ಈ ಕಬಡ್ಡಿ ಕ್ರೀಡಾಕೂಟ ಯಶಸ್ವಿಯಾಗಿ ಮುಗಿದಿದ್ದು, ಡಾ. ಪರಮೇಶ್ವರ ಅವರು ಎಲ್ಲ ತಂಡಗಳಿಗೆ ಅಭಿನಂದನೆ ಸಲ್ಲಿಸಿದರು. ಅವರು ಮುಂದುವರಿಸಿ, ಡಿಸೆಂಬರ್‌ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ದಕ್ಷಿಣ ಕನ್ನಡ ತಂಡ ರಾಜ್ಯಕ್ಕೆ ಕೀರ್ತಿ ತರಲಿ ಎಂದು ಶುಭ ಹಾರೈಸಿದರು. ಜನವರಿ 15ರಿಂದ ತುಮಕೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ 27 ಕ್ರೀಡೆಗಳಲ್ಲಿ ಸುಮಾರು 4,600 ತಂಡಗಳು ಭಾಗವಹಿಸಲಿವೆ ಎಂದು ಸಚಿವರು ತಿಳಿಸಿದರು.
