ವರದಿಗಾರರು :
ಸಾತಪ್ಪ ಮಾಂಗ್ಲಿ ||
ಸ್ಥಳ :
ಧಾರವಾಡ
ವರದಿ ದಿನಾಂಕ :
07-11-2025
ಆರ್‌ಟಿಐ ಕಾರ್ಯಕರ್ತರ ಹೆಸರಲ್ಲಿ ಸುಲಿಗೆ: ಐವರ ತಂಡ ಬಂಧನ
ಗೋಕುಲ್ ರೋಡ್ ಪೊಲೀಸರು ಬೃಹತ್ ಕಾರ್ಯಾಚರಣೆ – 1.70 ಲಕ್ಷ ರೂ. ವಶಪಡಿಕೆ
ಹುಬ್ಬಳ್ಳಿ, ನವೆಂಬರ್ 7 (ಬಿ.ಎಸ್. ತೋಟಯ್ಯನವರ ವರದಿ): ಆರ್‌ಟಿಐ ಕಾರ್ಯಕರ್ತರ ಹೆಸರಿನಲ್ಲಿ ಕೋಟ್ಯಂತರ ಹಣ ಸುಲಿಗೆ ಮಾಡಲು ಯತ್ನಿಸುತ್ತಿದ್ದ ಐವರ ತಂಡವನ್ನು ಗೋಕುಲ್ ರೋಡ್ ಪೊಲೀಸ್ ಠಾಣೆ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ. ಈ ತಂಡವು ಕೋ-ಆಪರೇಟಿವ್ ಬ್ಯಾಂಕ್‌ಗಳು ಹಾಗೂ ಸರ್ಕಾರಿ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಹಣ ಬೇಡುವ ಕೃತ್ಯ ಮಾಡುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಾದವರು ಗದಗ್ ಮೂಲದ ಮಂಜುನಾಥ್ ಹದ್ದಣ್ಣನವರ್, ಮುಂಡಗೋಡ್ ಮೂಲದ ವೀರೇಶ್ ಕುಮಾರ್ ಲಿಂಗದಾಳ, ಮಹದೇಶ್ವರ ಲಿಂಗದಾಳ, ಮಾಂಬಳೇಶ್ವರ್ ಶಿರೂರು ಹಾಗೂ ಶಿವಪ್ಪ ಬೊಮ್ಮನಹಳ್ಳಿ. ಇತರರು ಸಹ ಈ ಪ್ರಕರಣದಲ್ಲಿ ಶಾಮಿಲ್ ಆಗಿರುವ ಶಂಕೆ ವ್ಯಕ್ತವಾಗಿದೆ.
ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ನೀಡಿದ ಮಾಹಿತಿಯ ಪ್ರಕಾರ, ಆರೋಪಿಗಳು 1.5 ಕೋಟಿ ರೂ. ಸುಲಿಗೆ ಬೇಡಿಕೆ ಇಟ್ಟು, ಅಡ್ವಾನ್ಸ್ ಹಣ ಪಡೆಯುವ ವೇಳೆ ಪೊಲೀಸರ ಬಲೆಗೆ ಸಿಕ್ಕಿಬಿದ್ದರು. ಹುಬ್ಬಳ್ಳಿಯ ಸಮೃದ್ಧಿ ಕೋ-ಆಪರೇಟಿವ್ ಸೊಸೈಟಿಯವರು ದೂರು ನೀಡಿದ ನಂತರ ಪ್ರಕರಣ ದಾಖಲಾಗಿದೆ.
ಪೊಲೀಸರು ಆರೋಪಿಗಳಿಂದ 1.70 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಯಶಸ್ವಿ ಕಾರ್ಯಾಚರಣೆಯನ್ನು ಇನ್ಸ್‌ಪೆಕ್ಟರ್ ಪ್ರವೀಣ್ ಕುಮಾರ್ ನೀಲಮ್ಮನವರ್ ಅವರ ನೇತೃತ್ವದ ತಂಡ ಕೈಗೆತ್ತಿಕೊಂಡು ಆರೋಪಿಗಳನ್ನು ಬಂಧಿಸಿದೆ.
ಪೊಲೀಸರು ಪ್ರಕರಣದ ಇತರ ಶಂಕಿತ ಆರೋಪಿಗಳ ಹುಡುಕಾಟ ಮುಂದುವರಿಸಿದ್ದಾರೆ ಎಂದು ತಿಳಿಸಿದ್ದಾರೆ.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
