
ಲೈವ್ ಟಿವಿ ನ್ಯೂಸ್

ದಿನಾಂಕ : 24-03-2025
ಕನ್ನಡ ಸಿನಿಮಾ ಇಂಡಸ್ಟ್ರಿ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದೇನು
ವರದಿಗಾರರು : ಮೀನಾಕ್ಷಿ
ವರದಿ ಸ್ಥಳ : ಬೆಂಗಳೂರು
ಒಟ್ಟು ಓದುಗರ ಸಂಖ್ಯೆ : 17860+
ರಾಕಿಂಗ್ ಸ್ಟಾರ್ ಯಶ್ ಅವರೇ ಕನ್ನಡ ಚಿತ್ರರಂಗದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶನದಲ್ಲಿ ‘ಮನದ ಕಡಲು’ ಸಿನಿಮಾ ತೆರೆಗೆ ಬರೋದಕ್ಕೆ ಸಜ್ಜಾಗಿದೆ. ಹೀಗಾಗಿ ನಿನ್ನೆ ಸಂಜೆ ಟ್ರೈಲರ್ ಲಾಂಚ್ ಇವೆಂಟ್ಗೆ ರಾಕಿಂಗ್ ಸ್ಟಾರ್ ಯಶ್ ಅವರು ಅತಿಥಿಯಾಗಿ ಭಾಗವಹಿಸಿದ್ದರು. ಇದೇ ವೇಳೆ ನಟ ಯಶ್ ತಾವು ಸಿನಿಮಾ ರಂಗದಲ್ಲಿ ಬೆಳೆದು ಬಂದ ಹಾದಿಯನ್ನ ಮೆಲುಕು ಹಾಕಿದ್ದಾರೆ. ಜೊತೆಗೆ ಕನ್ನಡ ಚಿತ್ರರಂಗದ ಬಗ್ಗೆಯೂ ಮಾತಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಾನು ನೋಡ್ತಾನೇ ಇರ್ತೀನಿ, ನನಗೆ ಬೇಜಾರಾಗೋ ವಿಚಾರ ಏನೆಂದ್ರೆ, ನಾವು ಗೋಳಾಡೋದಕ್ಕಿಂತ ಒಳ್ಳೆಯ ಸಿನಿಮಾ ಮಾಡಬೇಕು. ನಾನು ಕೂಡ ಒಂದು ಸಂದರ್ಶನದಲ್ಲಿ ಜನ ಕನ್ನಡ ಸಿನಿಮಾಗಳನ್ನು ನೋಡಲ್ಲ ಎಂದಿದ್ದೆ. ಆ ಮೇಲೆ ಮನೆಯಲ್ಲಿ ಕುಳಿತುಕೊಂಡು ಯೋಚನೆ ಮಾಡಿದಾಗ ನನಗೆ ಅನ್ನಿಸಿತು. ನಮ್ಮ ಕೆಲಸ ನಾವು ಮಾಡೋಣ. ಒಳ್ಳೆಯ ಸಿನಿಮಾ ಕೊಟ್ಟರೆ ಕನ್ನಡಿಗರು, ಅಭಿಮಾನಿಗಳು ಯಾವಾಗಲೂ ಕೈಬಿಡೋದಿಲ್ಲ. ಇಂಡಸ್ಟ್ರಿಯಲ್ಲಿ ಎಲ್ಲರಿಗೂ ಕೇಳಿಕೊಳ್ಳುತ್ತೇನೆ, ಅಪ್ಗ್ರೇಡ್ ಆಗೋಣ, ಕೆಲಸ ಕಲಿಯೋಣ, ದೊಡ್ಡ ದೊಡ್ಡ ಗುರಿಗಳನ್ನು ಇಟ್ಟುಕೊಳ್ಳೋಣ, ಸ್ವಾಭಿಮಾನ ಬೆಳಸಿಕೊಳ್ಳೋಣ, ಬೇರೆಯವರು ಗೌರವಿಸೋ ತರ ಕೆಲಸ ಮಾಡೋಣ ಎಂದರು.
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















