
ಲೈವ್ ಟಿವಿ ನ್ಯೂಸ್

ದಿನಾಂಕ : 24-03-2025
ರಶ್ಮಿಕಾ ಮಗಳ ಜೊತೆಗೂ ಸಿನಿಮಾ ಮಾಡ್ತೇನೆ ನಿಮ್ಗೇನು? ಸಲ್ಮಾನ್ ಖಾನ್ ಆಕ್ರೋಶ
ವರದಿಗಾರರು : ಮೀನಾಕ್ಷಿ
ವರದಿ ಸ್ಥಳ : ಬೆಂಗಳೂರು
ಒಟ್ಟು ಓದುಗರ ಸಂಖ್ಯೆ : 17853+
ಕೊಡಗಿನ ಕುವರಿ, ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಖ್ಯಾತಿ ಪಡೆದುಕೊಂಡಿರೋ ರಶ್ಮಿಕಾ ಮಂದಣ್ಣ ಸದ್ಯ ಖುಷಿಯಲ್ಲಿದ್ದಾರೆ. ಇದಕ್ಕೆ ಕಾರಣ ‘ಸಿಕಂದರ್’. ಬಾಲಿವುಡ್ ಸ್ಟಾರ್ ಹೀರೋ ಸಲ್ಮಾನ್ ಖಾನ್ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ತೆರೆಗೆ ಬರಲು ಸಿಕಂದರ್ ಸಿನಿಮಾ ಸಜ್ಜಾಗಿದೆ. ಸಿನಿಮಾ ರಿಲೀಸ್ಗೂ ಮುನ್ನವೇ ರಶ್ಮಿಕಾ ನಟನೆಯ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಸಲ್ಮಾನ್ ಖಾನ್ ಅವರಿಗಿಂತ ರಶ್ಮಿಕಾ 31 ವರ್ಷ ಚಿಕ್ಕವರು ಎಂದು ಹೇಳಿ ಟ್ರೋಲ್ ಮಾಡಲಾಗಿತ್ತು. ಅಲ್ಲದೇ ಸಲ್ಮಾನ್ ಖಾನ್ ಜೊತೆಗೆ ರೊಮ್ಯಾನ್ಸ್ ವಿಚಾರಕ್ಕೂ ಟೀಕೆಗಳು ವ್ಯಕ್ತವಾಗಿದ್ದವು. ಆದ್ರೆ ಇದೀಗ ಎಲ್ಲದಕ್ಕೂ ಸಲ್ಲು ಭಾಯ್ ಪ್ರತಿಕ್ರಿಯೆ ನೀಡಿದ್ದಾರೆ. ಭಾನುವಾರ ಸಿಕಂದರ್ ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಲಾಗಿದೆ. ಕಾರ್ಯಕ್ರಮಮೊಂದರಲ್ಲಿ ಮಾತಾಡಿದ ಸಲ್ಲು ಭಾಯ್, ರಶ್ಮಿಕಾಗೆ ವಯಸ್ಸಿನ ಅಂತರದ ಬಗ್ಗೆ ಯಾವುದೇ ತೊಂದರೆ ಇಲ್ಲ. ಅವರ ತಂದೆಗೂ ಯಾವುದೇ ತೊಂದರೆ ಇಲ್ಲ. ಅವರಿಗಿಲ್ಲದ ಸಮಸ್ಯೆ ನಿಮಗೇಕೆ ಎಂದು ನಗು ನಗುತ್ತಲೇ ಟಾಂಗ್ ಕೊಟ್ಟಿದ್ದಾರೆ. ಮತ್ತೆ ಮಾತನ್ನು ಮುಂದುವರೆಸಿದ ಅವರು, ರಶ್ಮಿಕಾ ಮದುವೆಯಾದರೂ ನಾನು ಅವರ ಜೊತೆ ನಟನೆ ಮಾಡೋದಕ್ಕೆ ಸಿದ್ಧ. ಮುಂದೊಂದು ದಿನ ರಶ್ಮಿಕಾಗೆ ಮಗಳಾದರೆ ಆಕೆ ಜೊತೆಗೂ ಸಿನಿಮಾ ಮಾಡುತ್ತೇನೆ ಹೇಳಿದ್ದಾರೆ.
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















