ವರದಿಗಾರರು :
ಇಮಾಮಸಾಬ ಹಣಬರಕಡಬಿ ||
ಸ್ಥಳ :
ಸವದತ್ತಿ
ವರದಿ ದಿನಾಂಕ :
14-10-2025
ಕೊಟೂರ್ ಶಿವಾಪೂರ್ ಕೆಇಬಿ ಘಟಕದ ಸುತ್ತಮುತ್ತಲಿನ. ಗ್ರಾಮದ ರೈತರಿಂದ ಪೂರ್ವಭಾವಿ ಸಭೆ...
ಯರಗಟ್ಟಿ ತಾಲೂಕು ಕಡಬಿ ಗ್ರಾಮ ಪಂಚಾಯತಿಯ. ಆವರಣದಲ್ಲಿ. ಕೊಟೂರ. ಶಿವಾಪೂರ ಕೆಇಬಿ ಘಟಕದ ಸುತ್ತಮುತ್ತಲಿನ ಗ್ರಾಮಗಳ ರೈತರು .ರೈತ ಸಂಘಟನೆಯವರ ಪೂರ್ವಭಾವಿ ಸಭೆ ಜರುಗಿತು. ಈ ಸಭೆಯ ಉದ್ದೇಶ. ಕೋಟೂರ. ಶಿವಾಪುರ. ಕೆಇಬಿ ಘಟಕದಲ್ಲಿ 33 ಕೆ ವಿ ವಿದ್ಯುತ್ ಘಟಕ ಇದ್ದು. ಇದನ್ನು 110 ಕೆಇಬಿ ಘಟಕವಾದರೆ. ನಮ್ಮ ರೈತರಿಗೆ ಕರೆಂಟಿನ ಸಮಸ್ಯೆ ಬರುವುದಿಲ್ಲ ಎಂದು ಈಗಾಗಲೇ ಸಂಬಂಧಪಟ್ಟ. ಅಧಿಕಾರಿಗಳಿಗೆ ತಿಳಿಸಿದ್ದು. ಅವರು ನಮಗೆ ಆಶ್ವಾಸನೆ ಅಷ್ಟೇ ಸೀಮಿತಗೊಳಿಸಿದ್ದಾರೆ. ಆದುದರಿಂದ 110 ಕೆ ಇ ಬಿ ಘಟಕ ಶೀಘ್ರದಲ್ಲಿ ಸ್ಥಾಪಿಸಿ ನಮ್ಮ ರೈತರ ಕಷ್ಟಕ್ಕೆ ಬೆಳಕಾಗಬೇಕೆಂದು ಸಂಬಂಧಪಟ್ಟ ಇಲಾಖೆಗೆ ವಿನಂತಿಸುತ್ತ. ಇಲ್ಲದಿದ್ದರೆ ನೀವು ಆಶ್ವಾಸನೆ ಕೊಡುತ್ತಾ ಹೋದರೆ ನಾವು ಇದೇ ತಿಂಗಳು 17 ನೇ ತಾರೀಕಿನಿಂದ. ಕೋಟೂರು ಶಿವಾಪೂರ. ಕೆಇಬಿ ಘಟಕದ ಸಂಬಂಧಪಟ್ಟ ಸುತ್ತಮುತ್ತಲಿನ ಗ್ರಾಮದ ರೈತರು .ರೈತ ಸಂಘಟನೆಗಳು. ಯರಗಟ್ಟಿ ಯಲ್ಲಿ.110 ಕೆಇಬಿ ಸ್ಟೇಷನ್ ಮುತ್ತಿಗೆ ಹಾಕಿ ಬಂದ ಮಾಡುವುದಾಗಿ. ಕೃಷಿಕ ಸಮಾಜದ ಯುವ ಘಟಕದ ರಾಜ್ಯಾಧ್ಯಕ್ಷರಾದ ಮಹಾಂತೇಶ್ ತೋಟಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕೃಷಿಕ ಸಮಾಜ ರಾಜ್ಯಾಧ್ಯಕ್ಷರಾದ ಮಹಾಂತೇಶ್ ತೋಟಗಿ. ಅಶೋಕ್ ಹುಂಡೆಕರ್. ಮಹಾವೀರ್ ಹುಕ್ಕೇರಿ. ಚಿದಾನಂದ ಹಮ್ಮಣ್ಣವರ್. ಸೈದುಸಾಬ್ ಸನದಿ. ನಿಂಗಪ್ಪ ಮಾಳಕನವರ್. ಶ್ರೀಧರ್ ಉದಗಟ್ಟಿ. ಮುಂತಾದ ರೈತಪರ ಹೋರಾಟಗಾರರು ರೈತರು. ರೈತ ಸಂಘದ ಮುಖಂಡರು ಉಪಸ್ಥಿತರಿದ್ದರು.
