
ಲೈವ್ ಟಿವಿ ನ್ಯೂಸ್

ದಿನಾಂಕ : 24-03-2025
ನಾನಿ ಜೊತೆ ಶ್ರೀನಿಧಿ ಶೆಟ್ಟಿ ರೊಮ್ಯಾನ್ಸ್
ವರದಿಗಾರರು : ಮೀನಾಕ್ಷಿ
ವರದಿ ಸ್ಥಳ : ಬೆಂಗಳೂರು
ಒಟ್ಟು ಓದುಗರ ಸಂಖ್ಯೆ : 17777+
‘ಕೆಜಿಎಫ್ 2′ ನಟಿ ಶ್ರೀನಿಧಿ ಶೆಟ್ಟಿ ಅವರು ನ್ಯಾಚುರಲ್ ಸ್ಟಾರ್ ನಾನಿಗೆ Nani ಜೊತೆಯಾಗಿದ್ದಾರೆ. ‘ಹಿಟ್ 3’ ಸಿನಿಮಾದ ಮೂಲಕ ಮೋಡಿ ಮಾಡಲು ರೆಡಿಯಾಗಿದ್ದಾರೆ. ಸದ್ಯ ಈ ಸಿನಿಮಾದ ರೊಮ್ಯಾಂಟಿಕ್ ಸಾಂಗ್ವೊಂದು ರಿಲೀಸ್ ಆಗಿದೆ. ಸಾಂಗ್ಯೂ ಟ್ಯೂಬ್ನಲ್ಲಿ ಭರ್ಜರಿ ವಿವ್ಸ್ ಪಡೆದುಕೊಳ್ಳುತ್ತಿದೆ. ಮೊದಲ ಬಾರಿಗೆ ಹಿಟ್ 3 ಮೂಲಕ ನಾನಿಗೆ ಶ್ರೀನಿಧಿ ಜೋಡಿಯಾಗಿ ನಟಿಸಿದ್ದಾರೆ. ಸದ್ಯ ರಿಲೀಸ್ ಆಗಿರುವ ‘ಪ್ರೇಮ ವೆಲ್ಲುವ’ ಸಾಂಗ್ ನೋಡಿ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಡಿನಲ್ಲಿ ನಾನಿ ಮತ್ತು ಶ್ರೀನಿಧಿ ಕೆಮಿಸ್ಟ್ರಿ ಮುದ್ದಾಗಿದೆ. ಇಬ್ಬರ ಲವ್ ರೊಮ್ಯಾನ್ಸ್ ಚೆನ್ನಾಗಿ ಮೂಡಿ ಬಂದಿದೆ. ಇನ್ನೂ ನಾನಿ ನಟನೆಯ ‘ಹಿಟ್ 3’ (HIT 3) ಸಿನಿಮಾ ಮೇಲೆ ಫ್ಯಾನ್ಸ್ಗೆ ಭಾರೀ ನಿರೀಕ್ಷೆಯಿದೆ. ಈ ಹಿಂದಿನ 2 ಪಾರ್ಟ್ಗಳಲ್ಲಿ ಮೂಡಿ ಬಂದ ಹಿಟ್ ಸಿನಿಮಾ ಸಕ್ಸಸ್ ಕಂಡಿತ್ತು. ಹಾಗಾಗಿ ಸಹಜವಾಗಿ ಈ ಸಿನಿಮಾದ ಮೇಲೆ ಫ್ಯಾನ್ಸ್ಗೆ ಕುತೂಹಲವಿದೆ. ನಾನಿ ಅವತಾರ ನೋಡೋಕೆ ಅಭಿಮಾನಿಗಳು ಕಾಯ್ತಿದ್ದಾರೆ. ಈ ವರ್ಷ ಮೇ 1ರಂದು ಸಿನಿಮಾ ರಿಲೀಸ್ ಆಗಲಿದೆ.
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















