ವರದಿಗಾರರು :
ಪ್ರಕಾಶ್ ಕೆ ||
ಸ್ಥಳ :
ತಿಪಟೂರು
ವರದಿ ದಿನಾಂಕ :
11-11-2025
ಲಂಚ ಪಡೆಯುತ್ತಿದ್ದ ತಿಪಟೂರು ಎ.ಇ. ಸ್ವಾಮಿ ಲೋಕಾಯುಕ್ತ ಬಲೆಗೆ
ತಿಪಟೂರು: ತಾಲೂಕಿನಲ್ಲಿ ನಡೆದ ಕಾಮಗಾರಿಯೊಂದಕ್ಕೆ ಬಿಲ್ ಮಾಡುವ ಸಲುವಾಗಿ ಲಂಚ ಸ್ವೀಕರಿಸುತ್ತಿದ್ದ ತುಮಕೂರು ಜಿಲ್ಲಾ ಪಂಚಾಯಿತಿ ತಿಪಟೂರು ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಎ.ಇ.) ಸ್ವಾಮಿ ಬಿ.ಸಿ. ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಶಿವಮೊಗ್ಗ ಮೂಲದ ಪ್ರಥಮ ದರ್ಜೆ ಗುತ್ತಿಗೆದಾರ ಸುನಿಲ್ ಅವರಿಂದ ಲಂಚದ ಬೇಡಿಕೆಯ ಕುರಿತು ನೀಡಿದ ದೂರಿನ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬಲೆ ಬೀಸಿದರು. ತುಮಕೂರು ನಗರದಲ್ಲಿಯೇ ₹34,000 ನಗದು ಸ್ವೀಕರಿಸುತ್ತಿದ್ದ ವೇಳೆ ಸ್ವಾಮಿ ಅವರನ್ನು ಬಂಧಿಸಲಾಯಿತು.
ಸ್ಥಳದಲ್ಲಿಯೇ ಅಧಿಕಾರಿಯನ್ನು ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು ತನಿಖೆ ಕೈಗೊಂಡಿದ್ದು, ಇನ್ಸ್‌ಪೆಕ್ಟರ್ ರಾಜು ಅವರ ನೇತೃತ್ವದ ತಂಡ ತಿಪಟೂರು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
