ವರದಿಗಾರರು :
ಹುಲಗಪ್ಪ ಎಮ್ ಹವಾಲ್ದಾರ ||
ಸ್ಥಳ :
ಯಾದಗಿರಿ
ವರದಿ ದಿನಾಂಕ :
07-04-2025
*ಬೇಸಿಗೆ ಕ್ರೀಡಾ ತರಬೇತಿ ಶಿಬಿರ*
ಯಾದಗಿರಿ: ಯಾದಗಿರಿ ಜಿಲ್ಲಾ ಕ್ರಿಡಾಂಗಣದಲ್ಲಿ ಬೇಸಿಗೆ ಕ್ರೀಡಾ ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದು ಯಾದಗಿರಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ರಾಜುಬಾವಿಹಳ್ಳಿ ಅವರು ತಿಳಿಸಿದ್ದಾರೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಯಾದಗಿರಿ ಜಿಲ್ಲೆಯ ಜಿಲ್ಲಾ ಮತ್ತು ತಾಲೂಕು ಕ್ರೀಡಾಂಗಣಗಳಲ್ಲಿ ಏಪ್ರಿಲ್ ಮತ್ತು ಮೇ 2025ರ ಮಾಹೆಗಳಲ್ಲಿ ಕ್ರೀಡೆಗಳ ಬೇಸಿಗೆ ಕ್ರೀಡಾ ತರಬೇತಿ ಶಿಬಿರವನ್ನು 2025ರ ಏಪ್ರಿಲ್ 9ರ ಬುಧವಾರ ರಂದು ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ. ಆಸಕ್ತ ಶಾಲಾ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಈ ಬೇಸಿಗೆ ಕ್ರೀಡಾ ತರಬೇತಿ ಶಿಬಿರದಲ್ಲಿ ಭಾಗವಹಿಸಬೇಕು.
ಕ್ರೀಡೆಗಳ ಈಜು ಮಾಸಿಕ ಶುಲ್ಕ 1200 ರೂ.ಗಳ ನಿಗದಿಪಡಿಸಲಾಗಿದೆ. ಟೇಬಲ್ ಟೆನ್ನಿಸ್ ಮಾಸಿಕ ಶುಲ್ಕ 500 ರೂ.ಗಳ ನಿಗದಿಪಡಿಸಲಾಗಿದೆ. ವಾಲಿಬಾಲ್ ಮಾಸಿಕ ಶುಲ್ಕ 300 ರೂ.ಗಳ ನಿಗದಿಪಡಿಸಲಾಗಿದೆ. ಅಥ್ಲೆಟಿಕ್ಸ್ ಮಾಸಿಕ ಶುಲ್ಕ 60 ರೂ.ಗಳ (ಒಂದು ಕ್ರೀಡೆಗೆ) ನಿಗದಿಪಡಿಸಲಾಗಿದೆ. ಮಲ್ಲಕಂಬ ಮಾಸಿಕ ಶುಲ್ಕ ಉಚಿತವಾಗಿ ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಗೀರೀಶ, ಅಥ್ಲೆಟಿಕ್ಸ್ ತರಬೇತುದಾರರು, ಮೊ.ನಂ.9448806320, ಪ್ರಕಾಶ ಅಂಬಾರ, ವಾಲಿಬಾಲ್ ತರಬೇತುದಾರರು, ಮೊ.ನಂ.9886675263, ರವಿ, ಮಲ್ಲಕಂಬ ತರಬೇತುದಾರರು, ಮೊ.ನಂ.7022164990ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
