ವರದಿಗಾರರು :
ರಾಜಶೇಖರ ಮಾಲಿ ಪಾಟೀಲ್ ||
ಸ್ಥಳ :
ಶಹಾಪುರ
ವರದಿ ದಿನಾಂಕ :
06-06-2025
*ನಮ್ಮ ಸುತ್ತಮುತ್ತಲಿನ ಗಿಡ ಮರಗಳನ್ನು ಸಂರಕ್ಷಿಸೋಣ : ಅವಿನಾಶ್ ಗುತ್ತೇದಾರ್ ಹಳಿಸಗರ*
*ಶಹಾಪುರ, ಜೂನ್ 05* ಇಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಾವುಗಳು ಪ್ರತಿಯೊಬ್ಬರೂ ಗಿಡ ಮರಗಳನ್ನು ಪ್ರತಿಯೊಬ್ಬರೂ ಉತ್ತಮ ಪರಿಸರ ಹಾಗೂ ಉತ್ತಮ ಗಾಳಿಗಾಗಿ ಗಿಡಮರಗಳನ್ನು ಹೆಚ್ಚು ಬೆಳೆಸುವುದರಿಂದ ಬಿಸಿಲ ಬೇಗೆ ಕಡಿಮೆಯಾಗಿ ಜನರಿಗೆ ಉತ್ತಮ ಆಮ್ಲಜನಕ ದೊರೆಯಲಿದೆ. ಪರಿಸರದ ಸೌಂದರ್ಯವೂ ಹೆಚ್ಚಿಸಲಿದೆ ಮುಂದಿನ ಪೀಳಿಗೆಗಾಗಿ ಪರಿಸರ ಸಂರಕ್ಷಣೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ ಎಂದು ಬಿಜೆಪಿ ಯುವ ಮುಖಂಡ ಅವಿನಾಶ್ ಗುತ್ತೇದಾರ್ ಹಳಿಸಗರ ಹೇಳಿದ್ದರು.
ಇಂದು ವಿಶ್ವ ಪರಿಸರ ದಿನಾಚರಣೆ ದಿನದಿಂದ ನಾವು ಎಲ್ಲರೂ ನಮ್ಮ ನಮ್ಮ ಮನೆ ಅವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ಸುತ್ತಮುತ್ತಲಿನ ಪರಿಸರ ಮಾಲಿನ್ಯದಿಂದ ದೇಹಕ್ಕೆ ಉತ್ತಮ ಗಾಳಿ ಉತ್ತಮ ಆಮ್ಲಜನಕ ಸಿಗುವುದರಿಂದ ಉತ್ತಮ ಆರೋಗ್ಯ ಕೂಡ ಹೆಚ್ಚಿಸಿಕೊಳ್ಳಲು ಸಾಧ್ಯ, ನಾವುಗಳು ಗಿಡ ಮರಗಳನ್ನು ನೆಟ್ಟು ಇತರರಿಗೂ ಗಿಡ ನೆಡುವಂತೆ ಪ್ರೋತ್ಸಾಹಿಸಬೇಕು. ಎಂದರು. ಪ್ರತಿಯೊಬ್ಬರೂ ಪ್ಲಾಸ್ಟಿಕ್ ತ್ಯಜಿಸಿ ಬಟ್ಟೆ ಚೀಲಗಳನ್ನು ಬಳಸಬೇಕು. ಮರುಬಳಕೆ ವಸ್ತುಗಳನ್ನು ಉಪಯೋಗಿಸುವುದರೊಂದಿಗೆ ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದು' ಎಂದರು.
ಪ್ರಸ್ತುತ ದಿನಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಗಿಡ-ಮರಗಳ ಮಾರಣಹೋಮ ನಡೆಯುತ್ತಿದೆ. ಪ್ರತಿಯೊಬ್ಬರೂ ಹುಟ್ಟಿದ ದಿನದಂದು ಗಿಡ ನೆಟ್ಟು ಅದರ ಪಾಲನೆ ಪೋಷಣೆ ಮಾಡಬೇಕು. ಮದುವೆ ಸಮಾರಂಭಗಳಲ್ಲಿ ಉಡುಗೊರೆಗಳ ಬದಲಾಗಿ ಗಿಡಗಳನ್ನು ನೀಡುವುದರಿಂದ ಪರಿಸರವನ್ನು ಉಳಿಸಬಹುದು. ನಮ್ಮ ಸುತ್ತಮುತ್ತಲಿನ ಪರಿಸರವನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮರ-ಗಿಡಗಳನ್ನು ಪೋಷಿಸಿದರೆ, ನಮ್ಮ ವೈಯಕ್ತಿಕ ಜೀವನ ಜೊತೆಗೆ ಉತ್ತಮ ಆರೋಗ್ಯ ಪರಿಸರವು ಸಂರಕ್ಷಿಸೋಣ ಎಂದು ಅವಿನಾಶ್ ಗುತ್ತೇದಾರ್ ತಿಳಿಸಿದರು...
