ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
19-12-2025
ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಮೈಲಿಗಲ್ಲು.
ಜಾಗತಿಕ ಮಾರುಕಟ್ಟೆಯಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.
ಪ್ರಧಾನಿ ನರೇಂದ್ರ ಮೋದಿ ಓಮಾನ್ ದೇಶದ ಪ್ರವಾಸದಲಿದ್ದು ಭಾರತ ಮತ್ತು ಓಮಾನ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿವೆ.
ಈ ಮೂಲಕ ಭಾರತದಿಂದ ಆಮದಾಗುವ ಶೇ.99 ಉತ್ಪನ್ನಗಳು ತೆರಿಗೆರಹಿತವಾಗಿವೆ. ಈ ಒಪ್ಪಂದ ಎಪ್ರಿಲ್ 2026 ರಿಂದ ಜಾರಿಗೆ ಬರಲಿದ್ದು, ಉಭಯ ದೇಶಗಳ ಈ ಮಹತ್ತರ ವ್ಯಾಪಾರ ಒಪ್ಪಂದಗಳಿಂದ ಜಾಗತಿಕ ವಲಯದಲ್ಲಿ ಭಾರತ ಹೊಸ ಮೈಲಿಗಲ್ಲು ಸಾಧಿಸಿದಂತಾಗಿದೆ.
ವಿವಿಧ ಕ್ಷೇತ್ರಗಳ ಹೂಡಿಕೆಗೆ ಒಮಾನ್ ಭಾರತಕ್ಕೆ ಮುಕ್ತ ಅವಕಾಶ ಕಲ್ಪಿಸಿದೆ.
ಭಾರತ ಪ್ರಧಾನಿ ನರೇಂದ್ರ ಮೋದಿಯವರಿಗೆ ಒಮಾನ್ ಅತ್ಯುನ್ನತ ನಾಗರಿಕ ಪ್ರಶಸ್ತಿ ಆರ್ಡರ್ ಆಪ್ ಒಮಾನ್ ಪ್ರಶಸ್ತಿ ನೀಡಿ ಗೌರವಿಸಿದೆ. ಉಭಯ ದೇಶಗಳ ಸಂಬಂಧ ಸೌಹಾರ್ದತೆಗೆ ಪ್ರಧಾನಿ ಮೋದಿ ನೀಡಿದ ಕೊಡುಗೆಗಾಗಿ ಅರಬ್ ದೇಶ ಒಮಾನ್ ಈ ಪ್ರಶಸ್ತಿಯನ್ನ ನೀಡಿ ಗೌರವಿಸಿದೆ. ಈ ಮೂಲಕ 29 ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಪ್ರಧಾನಿ ನರೇಂದ್ರ ಮೋದಿ ಭಾಜನರಾದರು.
