ವರದಿಗಾರರು :
ಬಸವರಾಜ ||
ಸ್ಥಳ :
ಬೀದರ
ವರದಿ ದಿನಾಂಕ :
17-11-2025
“ಬಂಜಾರ ಭವನಕ್ಕೆ ಮಹಾಪಾಲಿಕೆ ಕಚೇರಿ ಸ್ಥಳಾಂತರಕ್ಕೆ ಬಂಜಾರ ಸೇವಾ ಸಂಘದ ವಿರೋಧ”
ಬೀದರ ಮಹಾನಗರ ಪಾಲಿಕೆ ಕಚೇರಿಯನ್ನು ಬಂಜಾರ ಭವನಕ್ಕೆ ಸ್ಥಳಾಂತರಿಸುವ ಕ್ರಮವನ್ನು ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಬೀದರ ಜಿಲ್ಲಾ ಘಟಕ ತೀವ್ರವಾಗಿ ವಿರೋಧಿಸಿದೆ. ಸಂಘದ ಅಧ್ಯಕ್ಷ ಸುಧಾಕರ ರಾಠೋಡ್ ಅವರ ನೇತೃತ್ವದಲ್ಲಿ ನಿಯೋಗವು ಜಿಲ್ಲಾಧಿಕಾರಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಹಾಗೂ ತಾಂಡ ಅಭಿವೃದ್ಧಿ ನಿಗಮದ ವಲಯ ಅಧಿಕಾರಿಗಳಿಗೆ ಪ್ರತ್ಯೇಕ ಮನವಿ ಪತ್ರಗಳನ್ನು ಸಲ್ಲಿಸಿತು.
ಬಂಜಾರ ಸಮಾಜದ ಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳಿಗಾಗಿ ನಿರ್ಮಿಸಿದ ಭವನಕ್ಕೆ ಮಹಾನಗರ ಪಾಲಿಕೆ ಕಚೇರಿ ಸ್ಥಳಾಂತರಿಸುವುದು ಅನ್ಯಾಯಕರ ಎಂದು ಸಂಘದ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು. ಸಮಾಜದ ಚಟುವಟಿಕೆಗಳಿಗೆ ಅಡಚಣೆ ಉಂಟಾಗದಂತೆ ಪಾಲಿಕೆ ಕಚೇರಿಯನ್ನು ಬೇರೆ ಸರ್ಕಾರಿ ಕಟ್ಟಡಕ್ಕೆ ಸ್ಥಳಾಂತರಿಸಲು ಅವರು ಒತ್ತಾಯಿಸಿದರು.
ಕಾರ್ಯಾಧ್ಯಕ್ಷ ಜಿತೇಂದ್ರ ರಾಠೋಡ್, ಉಪಾಧ್ಯಕ್ಷ ಪ್ರಮೋದ್ ನಾಯಕ್, ಸಿಕೇಂದ್ರ ರಾಠೋಡ್, ಕರಣ್ ಪವಾರ್, ನಿಲೇಶ್ ರಾಠೋಡ್, ರಾಜಕುಮಾರ ಜಾಧವ್, ಪರಶುರಾಮ ಚವಾಣ್, ಮಿಥುನ್, ರಾಹುಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
