ವರದಿಗಾರರು :
ಮೀನಾಕ್ಷಿ ರಮೇಶ್ ರಾಠೋಡ್ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
25-03-2025
2026ರ ಸಂಕ್ರಾಂತಿಯಂದು ರಿಲೀಸ್ ಆಗಲಿದೆ ವಿಜಯ್ ನಟನೆಯ ಕೊನೆಯ ಸಿನಿಮಾ!
ತಮಿಳು ನಟ ವಿಜಯ್ ನಟನೆಯ ಕೊನೆಯ ಚಿತ್ರ ‘ಜನ ನಾಯಗನ್’ ರಿಲೀಸ್ ಡೇಟ್ ಬಗ್ಗೆ ಅಪ್‌ಡೇಟ್ ಸಿಕ್ಕಿದೆ. ಮುಂದಿನ ವರ್ಷ ಸಂಕ್ರಾಂತಿ ಹಬ್ಬದಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.
ಕೊನೆಗೂ ವಿಜಯ್ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಸಿಕ್ಕಿದೆ. ವಿಜಯ್ ಕೊನೆಯ ಚಿತ್ರ ಮುಂದಿನ ವರ್ಷ ಜನವರಿ 9ರಂದು ರಿಲೀಸ್ ಮಾಡೋದಾಗಿ ಚಿತ್ರತಂಡ ಅಪ್‌ಡೇಟ್ ಹಂಚಿಕೊಂಡಿದೆ. ಸಂಕ್ರಾಂತಿ ಹಬ್ಬದ ಸಡಗರದ ನಡುವೆ ವಿಜಯ್ ಕೊನೆಯ ಚಿತ್ರದ ಅಬ್ಬರ ಕೂಡ ಇರಲಿದೆ.
ಈ ಚಿತ್ರವನ್ನು ಕೆವಿಎನ್ ಸಂಸ್ಥೆ ನಿರ್ಮಾಣ ಮಾಡಿದೆ. ‘ಜನ ನಾಯಗನ್’ ರಾಜಕೀಯಕ್ಕೆ ಸಂಬಂಧಪಟ್ಟ ಚಿತ್ರವಾಗಿದೆ. ಈಗಾಗಲೇ ಚಿತ್ರದ ಪೋಸ್ಟರ್‌ನಿಂದ ಕುತೂಹಲ ಮೂಡಿಸಿದೆ. ‘ಬೀಸ್ಟ್’ ಚಿತ್ರದ ನಂತರ ‘ಜನ ನಾಯಗನ್’ ಚಿತ್ರದ ಮೂಲಕ 2ನೇ ಬಾರಿ ವಿಜಯ್ ಮತ್ತು ಪೂಜಾ ಹೆಗ್ಡೆ ಜೊತೆಯಾಗ್ತಿದ್ದಾರೆ.
ಇನ್ನೂ ಈ ಚಿತ್ರದ ಬಳಿಕ ಮತ್ತೆ ತಾವು ನಟಿಸುವುದಿಲ್ಲ. ರಾಜಕೀಯದಲ್ಲಿ ಇರೋದಾಗಿ ವಿಜಯ್ ಈಗಾಗಲೇ ತಿಳಿಸಿದ್ದಾರೆ. ಹಾಗಾಗಿ ನಟನ ಕೊನೆಯ ಸಿನಿಮಾ ಸಂಭ್ರಮಿಸಲು ಫ್ಯಾನ್ಸ್ ಕಾಯ್ತಿದ್ದಾರೆ.
