ವರದಿಗಾರರು :
ಮೀನಾಕ್ಷಿ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
19-03-2025
ಶಿವಣ್ಣ ನಿವಾಸಕ್ಕೆ ಯಶ್ ದಂಪತಿ ಭೇಟಿ !
ಹ್ಯಾಟ್ರಿಕ್ ಹೀರೋ ಶಿವಣ್ಣ ನಿವಾಸಕ್ಕೆ ಯಶ್ (Yash) ಮತ್ತು ರಾಧಿಕಾ ಪಂಡಿತ್ ಭೇಟಿ ನೀಡಿದ್ದಾರೆ. ಶಿವಣ್ಣ ಆರೋಗ್ಯದಲ್ಲಿ ಚೇತರಿಕೆಯ ನಂತರ ಮೊದಲ ಬಾರಿಗೆ ಯಶ್ ದಂಪತಿ ಭೇಟಿ ಕೊಟ್ಟಿದ್ದಾರೆ. ಇತ್ತೀಚೆಗೆ ಚಿಕಿತ್ಸೆಗಾಗಿ ಶಿವಣ್ಣ ಅಮೆರಿಕಗೆ ಹೊರಟ ಸಂದರ್ಭದಲ್ಲಿ ಯಶ್ ಸಿನಿಮಾ ಕೆಲಸದಲ್ಲಿ ಬ್ಯುಸಿಯಿದ್ದರು. ಆ ನಂತರ ಗುಣಮುಖರಾಗಿ ವಿದೇಶದಿಂದ ಬಂದ್ಮೇಲೆಯೂ ಶಿವಣ್ಣರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆ ನಟನ ವಿವಾಸಕ್ಕೆ ಯಶ್ ಮತ್ತು ರಾಧಿಕಾ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
