ಲೈವ್ ಟಿವಿ ನ್ಯೂಸ್

ದಿನಾಂಕ : 31-03-2025

ಲಂಚ್ ಡೇಟ್‌ನಲ್ಲಿ ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ; ಮಾಸ್ಕ್ ಹಾಕಿಕೊಂಡು ಸಿಕ್ಕಿಬಿದ್ದ ಜೋಡಿ !

ವರದಿಗಾರರು : ಮೀನಾಕ್ಷಿ ರಮೇಶ್ ರಾಠೋಡ್
ವರದಿ ಸ್ಥಳ :ಬೆಂಗಳೂರು
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 14483+

ಟಾಲಿವುಡ್‌ ನಟ ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಗುಟ್ಟಾಗಿ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ಅನುಮಾನಗಳಿವೆ. ಈ ಸುದ್ದಿ ಹರಡಲು 2023ರಲ್ಲಿ ಈ ಜೋಡಿಯ ಮಾಲ್ಡೀವ್ಸ್‌ ಫೋಟೋ ವೈರಲ್‌ ಆಗಿದ್ದೇ ಕಾರಣವಾಗಿತ್ತು. ಬಳಿಕ ಹಲವು ಬಾರಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುವುದರ ಮೂಲಕ ಗಾಸಿಪ್‌ಗಳಿಗೆ ಪುಷ್ಠಿ ನೀಡುತ್ತಲೇ ಇದೆ. ಅಂತೆಯೇ ಇದೀಗ ಮುಂಬೈನ ಹೋಟೆಲ್‌ ಒಂದರಲ್ಲಿ ಲಂಚ್‌ ಡೇಟಿಂಗ್‌ ವೇಳೆ ಕ್ಯಾಮೆರಾಗೆ ಸಿಕ್ಕಿ ಬಿದ್ದಿದ್ದಾರೆ.

ಲಂಚ್‌ ಡೇಟ್‌ ವೇಳೆ ಸಿಕ್ಕಿಬಿದ್ದ ಜೋಡಿ! : ಯೆಸ್..‌ ಇತ್ತೀಚೆಗೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಮುಂಬೈನ ಖಾಸಗಿ ಹೋಟೆಲ್‌ ಒಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡು ಡೇಟಿಂಗ್‌ ವದಂತಿಗಳಿಗೆ ಪುಷ್ಠಿ ನೀಡಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಖತ್‌ ವೈರಲ್‌ ಆಗಿದೆ. ರಶ್ಮಿಕಾ ಮಂದಣ್ಣ ನಟನೆಯ ʻಸಿಕಂದರ್‌ʼ ಸಿನಿಮಾ ರಿಲೀಸ್‌ ಆಗಿದೆ. ಈ ಕಡೆ ವಿಜಯ್‌ ದೇವರಕೊಂಡ ಅವರು ಕೂಡ ಸಿನಿಮಾದಲ್ಲಿ ಬ್ಯುಸಿಯಿದ್ದಾರೆ. ಇಬ್ಬರೂ ಸಿನಿಮಾಗಳಿಂದ ಬಿಡುವು ಮಾಡಿಕೊಂಡು ಲಂಚ್‌ ಡೇಟ್‌ಗಾಗಿ ಹೋಟೆಲ್‌ಗೆ ಬಂದಿದ್ದಾರೆ.

ರಶ್ಮಿಕಾ ಮತ್ತು ವಿಜಯ್‌ ದೇವರಕೊಂಡ ಹೋಟೆಲ್‌ಗೆ ಬರುವಾಗ ಮಾಸ್ಕ್‌ ಧರಿಸಿಕೊಂಡು ತಲೆಗೆ ಕ್ಯಾಪ್‌ ಧರಿಸಿ ಬಂದಿದ್ದಾರೆ. ಆದರೆ ಇಬ್ಬರು ಬೇರೆ ಬೇರೆ ಕಾರ್‌ಗಳಲ್ಲಿ ಬಂದಿದ್ದಾರೆ. ಪಾಪರಾಜಿಗಳನ್ನು ನೋಡುತ್ತಿದ್ದಂತೆ ಮಾಸ್ಕ್‌ ತೆಗೆದು ರಶ್ಮಿಕಾ ನಗುತ್ತಲೇ ಪೋಸ್‌ ನೀಡಿದ್ದಾರೆ. ಆದರೆ ವಿಜಯ್‌ ದೇವರಕೊಂಡ ಗುರುತೇ ಸಿಗದ ಹಾಗೆ ಮಾಸ್ಕ್‌ ಧರಿಸಿ ತಲೆಗೆ ಟೋಪಿ ತೊಟ್ಟು, ಹೋಟೆಲ್‌ ಒಳಗೆ ಹೋಗಿದ್ದಾರೆ.

ರಶ್ಮಿಕಾ-ವಿಜಯ್‌ ದೇವರಕೊಂಡ ಸಿನಿಮಾಗಳು : ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಒಟ್ಟಿಗೆ ʻಗೀತ ಗೋವಿದಂʼ ಹಾಗೂ ʻಡಿಯರ್‌ ಕಾಮ್ರೆಡ್‌ʼ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರಿಬ್ಬರ ಕಾಂಬೋದ ಸಿನಿಮಾಗಳು ಸಖತ್‌ ಹಿಟ್‌ ಆಗಿವೆ. ಇವರಿಬ್ಬರ ಕೆಮಿಸ್ಟ್ರೀ ಅಭಿಮಾನಿಗಳಿಗೂ ಹೆಚ್ಚು ಕನೆಕ್ಟ್‌ ಆಗಿದ್ದು, ರಿಯಲ್‌ ಲೈಫ್‌ನಲ್ಲಿ ಇಬ್ಬರು ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ರಶ್ಮಿಕಾ ಆಗಲಿ, ವಿಜಯ್‌ ದೇವರಕೊಂಡ ಆಗಲಿ ಇಲ್ಲಿಯವರೆಗೂ ತುಟಿ ಬಿಚ್ಚಿಲ್ಲ.

ಡೇಟಿಂಗ್‌ ಗಾಸಿಪ್‌ ಹಬ್ಬಿದ್ದು ಹೇಗೆ? : 2023ರಿಂದ ಇವರಿಬ್ಬರ ಬಗ್ಗೆ ಗಾಸಿಪ್‌ ಹಬ್ಬಿದೆ. ಇಬ್ಬರೂ ಒಟ್ಟಿಗೆ ಮಾಲ್ಡೀವ್ಸ್‌ನಲ್ಲಿ ರಜಾ ದಿನಗಳನ್ನು ಕಳೆದರು ಎಂದು ಹೇಳಲಾಗಿತ್ತು. ಇವರಿಬ್ಬರೂ ತಮ್ಮ ಪ್ರೀತಿಯ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿಲ್ಲವಾದರೂ, ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುವುದು ಮತ್ತು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡುವುದು ಗಾಸಿಪ್‌ಗೆ ಕಾರಣವಾಗಿದೆ. ವಿಜಯ್‌ ದೇವರಕೊಂಡು ತಾವು ಪ್ರೀತಿಯಲ್ಲಿರುವುದಾಗಿ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಆದರೆ ಹುಡುಗಿ ಯಾತರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಸದ್ಯ ರಶ್ಮಿಕಾ ಮಂದಣ್ಣ ʻಸಿಕಂದರ್‌ʼ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿದ್ದಾರೆ. ಈ ಕಡೆ ವಿಜಯ್‌ ʻಕಿಂಗ್ಡಮ್‌ʼ ಸಿನಿಮಾದ ರಿಲೀಸ್‌ಗಾಗಿ ಕಾಯುತ್ತಿದ್ದಾರೆ.

ರಶ್ಮಿಕಾ ಮತ್ತು ಸಲ್ಮಾನ್‌ ಖಾನ್‌ ನಟನೆಯ ʻಸಿಕಂದರ್‌ʼ ಸಿನಿಮಾ ಭಾನುವಾರ ಮಾರ್ಚ್‌ 30ರಂದು ತೆರೆಗೆ ಬಂದಿದೆ. ಸಿನಿಮಾ ರಿಲೀಸ್‌ ಬಳಿಕವೇ ರಶ್ಮಿಕಾ ಮಂದಣ್ಣ ವಿಜಯ್‌ ದೇವರಕೊಂಡ ಅವರ ಜೊತೆ ಲಂಚ್‌ ಡೇಟ್‌ಗೆ ಹೋಗಿದ್ದಾರೆ. ಇದು ಇವರಿಬ್ಬರ ಡೇಟಿಂಗ್‌ ಬಗ್ಗೆ ಇನ್ನಷ್ಟು ಅನುಮಾನ ಹುಟ್ಟಿಸಿದೆ.

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand