ವರದಿಗಾರರು :
ಮುತ್ತುರಾಜ್ ||
ಸ್ಥಳ :
ಕೊರಟಗೆರೆ
ವರದಿ ದಿನಾಂಕ :
31-10-2025
ತುಮಕೂರಿನಲ್ಲಿ 400 ಗ್ರಾಂ ಗಾಂಜಾ ವಶಕ್ಕೆ – 6 ಹಸಿ ಗಿಡಗಳು ಜಪ್ತಿ
ತುಮಕೂರು: ಕೊರಟಗೆರೆ ಮತ್ತು ಮಧುಗಿರಿ ಅಬಕಾರಿ ಇಲಾಖೆಯವರು ಬುಕ್ಕಾಪಟ್ಟಣ ಗ್ರಾಮದ ಕಾಮಣ್ಣ ಬಿನ್ ಲೇಟ್ ದೊಡ್ಡಯ್ಯ ಅವರ ಜಮೀನಿನಲ್ಲಿ ಬೆಳೆದ 6 ಹಸಿ ಗಾಂಜಾ ಗಿಡಗಳು ಹಾಗೂ ಸುಮಾರು 400 ಗ್ರಾಂ ಮಿಶ್ರಿತ ಎಲೆ, ಕಾಂಡ, ರೆಂಬೆ, ತೆನೆಗಳನ್ನು ವಶಪಡಿಸಿಕೊಂಡಿದ್ದಾರೆ. ಜಂಟಿ ಕಾರ್ಯಾಚರಣೆಯನ್ನು ತುಮಕೂರು ಅಬಕಾರಿ ಆಯುಕ್ತರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಅಧೀಕ್ಷಕ ದೀಪಕ್ ಎಸ್., ಅಬಕಾರಿ ನಿರೀಕ್ಷಕಿ ಕೀರ್ತನ ಟಿ.ಆರ್. ಮತ್ತು ಸಿಬ್ಬಂದಿ ಹಮೀದ್ ಬುಡಕಿ, ರಮೇಶ್ ಬಿ.ಎನ್., ರಾಜೇಶ್, ಜಗದೀಶ್ ಜಿ., ಕುಮಾರ್ ಸಿ.ಎನ್. ಹಾಗೂ ನಿಂಗಪ್ಪ ಮತ್ತು ಮಧು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಘಟನೆ ನಂತರ, ಸಂಬಂಧಪಟ್ಟ ವ್ಯಕ್ತಿಯ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.
