ವರದಿಗಾರರು :
ಮೀನಾಕ್ಷಿ ರಮೇಶ್ ರಾಠೋಡ್ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
30-03-2025
ಬೌಲಿಂಗ್, ಫೀಲ್ಡಿಂಗ್, ಬ್ಯಾಟಿಂಗ್‌ನಲ್ಲಿ ಡೆಲ್ಲಿ ಕಮಾಲ್ – ಹೈದರಾಬಾದ್‌ಗೆ ಮತ್ತೆ ಸನ್‌ಸ್ಟ್ರೋಕ್!
ವಿಶಾಖಪಟ್ಟಣ: ಅತ್ಯುತ್ತಮ ಫೀಲ್ಡಿಂಗ್, ಬೌಲಿಂಗ್, ಬ್ಯಾಟಿಂಗ್ ಪ್ರದರ್ಶನದಿಂದ ಡೆಲ್ಲಿ ಕ್ಯಾಪಿಟಲ್ಸ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ 18.4 ಓವರ್‌ಗಳಲ್ಲಿ 163 ರನ್‌ಗಳಿಗೆ ಆಲೌಟ್ ಆಯ್ತು. ಸುಲಭವದ ಸವಾಲನ್ನು ಬೆನ್ನಟ್ಟಿದ ಡೆಲ್ಲಿ 16 ಓವರ್‌ಗಳಲ್ಲಿ 166 ರನ್ ಹೊಡೆದು ಜಯ ಸಾಧಿಸಿತು.
ಡೆಲ್ಲಿ ಪರ ಫಾಫ್ ಡುಪ್ಲೆಸಿಸ್ ಆರಂಭದಲ್ಲೇ ಅಬ್ಬರಿಸಿದರು. ಡುಪ್ಲೆಸಿಸ್ ಮತ್ತು ಮೆಕ್‌ಗುರ್ಕ್ ಮೊದಲ ವಿಕೆಟಿಗೆ 55 ಎಸೆತಗಳಲ್ಲಿ 81 ರನ್ ಜೊತೆಯಾಟವಾಡಿ ಭದ್ರವಾದ ಅಡಿಪಾಯ ಹಾಕಿದರು. ಡುಪ್ಲೆಸಿಸ್ 50 ರನ್ (27 ಎಸೆತ, 3 ಬೌಂಡರಿ, 3 ಸಿಕ್ಸ್ ) ಹೊಡೆದರೆ ಮೆಕ್‌ಗುರ್ಕ್ 38 ರನ್(32 ಎಸೆತ, 4 ಬೌಂಡರಿ, 2 ಸಿಕ್ಸ್ ) ಹೊಡೆದು ಔಟಾದರು. ನಂತರ ಬಂದ ನಾಯಕ ಕೆಎಲ್ ರಾಹುಲ್ 15 ರನ್ (5 ಎಸೆತ, 2 ಬೌಂಡರಿ, 1 ಸಿಕ್ಸ್) ಹೊಡೆದು ಪೆವಿಲಿಯನ್ ಸೇರಿದರು.
ಅತ್ಯುತ್ತಮ ಫೀಲ್ಡಿಂಗ್: ಡೆಲ್ಲಿ ಗೆಲುವಿನಲ್ಲಿ ಫೀಲ್ಡಿಂಗ್ ಮುಖ್ಯ ಪಾತ್ರವಹಿಸಿತ್ತು. ಆರಂಭದಲ್ಲಿ ಅಭಿಶೇಕ್ ಶರ್ಮಾ 1 ರನ್‌ಗಳಿಸಿ ರನೌಟ್ ಆದರು. ನಂತರ ಬಂದ ಇಶನ್ ಕಿಶನ್ ಅವರು ಸಿಕ್ಸ್ ಸಿಡಿಸಲು ಹೋಗಿ ಸ್ಟಬ್ಸ್ ಹಿಡಿದ ಕ್ಯಾಚ್‌ಗೆ ಔಟಾದರು.
ಜೇಕ್ ಫ್ರೇಸರ್-ಮೆಕ್‌ಗುರ್ಕ್ ಅವರು 74 ರನ್(41 ಎಸೆತ, 5 ಬೌಂಡರಿ, 6 ಸಿಕ್ಸ್) ಹೊಡೆದು ಸ್ಫೋಟಕ ಆಟವಾಡುತ್ತಿದ್ದ ಅಂಕಿತ್ ವರ್ಮಾ ಅವರ ಕ್ಯಾಚನ್ನು ಬೌಂಡರಿ ಬಳಿ ಹಾರಿ ಹಿಡಿದರು. ಇದಕ್ಕೂ ಮೊದಲು ಪ್ಯಾಟ್ ಕಮ್ಮಿನ್ಸ್ ಅವರ ಕ್ಯಾಚನ್ನು ಹಿಡಿದಿದ್ದರು.
ಅಕ್ಷರ್ ಪಟೇಲ್ ಅವರು ನಿತೀಶ್ ಕುಮಾರ್ ರೆಡ್ಡಿ ಮತ್ತು ಡುಪ್ಲೆಸಿಸ್ ಅವರು ಮಲ್ಡರ್ ಅವರ ಕ್ಯಾಚನ್ನು ಡೈವ್ ಮಾಡಿದ ಹಿಡಿದ ಕಾರಣ ಹೈದರಾಬಾದ್ ಅಂತಿಮವಾಗಿ 163 ರನ್‌ಗಳಿಗೆ ಆಲೌಟ್ ಆಯ್ತು.
ಮಿಶೆಲ್ ಸ್ಟ್ರಾರ್ಕ್ 5 ವಿಕೆಟ್ ಪಡೆದರೆ ಕುಲದೀಪ್ ಯಾದವ್ 3 ವಿಕೆಟ್, ಮೋಹಿತ್ ಶರ್ಮಾ 1 ವಿಕೆಟ್ ಕಿತ್ತರು.
ಅಂಕಪಟ್ಟಿಯಲ್ಲಿ ಸತತ 2 ಪಂದ್ಯಗಳನ್ನು ಗೆದ್ದ ಆರ್‌ಸಿಬಿ ಮೊದಲ ಸ್ಥಾನದಲ್ಲಿದ್ದರೆ ಡೆಲ್ಲಿ 2 ಸ್ಥಾನಕ್ಕೆ ಜಿಗಿಯಿತು. ಮೂರು ಪಂದ್ಯಗಳ ಪೈಕಿ 1 ಜಯ ಎರಡರಲ್ಲಿ ಸೋಲು ಸಂಪಾದಿಸಿದ ಹೈದರಾಬಾದ್ ಏಳನೇ ಸ್ಥಾನಕ್ಕೆ ಜಾರಿದೆ.
