ವರದಿಗಾರರು :
ಹುಲಗಪ್ಪ ಎಮ್ ಹವಾಲ್ದಾರ ||
ಸ್ಥಳ :
ಸುರಪುರ
ವರದಿ ದಿನಾಂಕ :
16-10-2025
*ಬೇಸಿಗೆ ಬೆಳೆಗೆ ನೀರು ಒದಗಿಸಿ ಕೊಡಬೇಕು ಮತ್ತು ಬೆಳೆ ಹಾನಿಯಾದ ರೈತರಿಗೆ ಪರಿಹಾರ ಒದಗಿಸಬೇಕು ,ನಿಂಗಪ್ಪ ನಾಯಕ್ ಬ
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದಂಡಾಧಿಕಾರಿ ಗಳಿಗೆ ಈಗಾಗಲೇ ರೈತರು ಬೆಳೆದಿರುವಂತ ಅತ್ಯ ಕಾರ್ಯದ ಕೇಂದ್ರದ ಮುಖಾಂತರ ಹತ್ತಿಯನ್ನು ಖರೀದಿ ಮಾಡಬೇಕೆಂದು ಒತ್ತಾಯಿಸಿದರು ಮತ್ತು ಬೇಸಿಗೆ ಬೆಳೆಗೆ ನೀರಿನ ಸಲಹೆ ಸಮಿತಿಯ ಸಭೆಯನ್ನು ಕರೆದು ಆದಷ್ಟು ಬೇಗ ರೈತರಿಗೆ ಬೇಸಿಗೆಯ ನೀರನ್ನು ಒದಗಿಸಿ ಕೊಡಬೇಕೆಂದು ನಿಂಗಪ್ಪ ನಾಯಕ್ ಬಿಜಾಸಪೂರ ಅವರು ಸರ್ಕಾರಕ್ಕೆ ಆಗ್ರಹ ಮಾಡಿದರು
ಹಾಗೂ ನಮ್ಮ ಸಂಘಟನೆ ವತಿಯಿಂದ ಹಲವಾರು ಬಾರಿ ಮನವಿ ಕೊಟ್ಟಿದ್ದರು ಕೂಡ ಯಾವುದೇ ಸ್ಪಂದನೆ ನಮಗೆ ಸಿಕ್ಕಿಲ್ಲವೆಂದು ತಸಿಲ್ದಾರ್ ಅವರ ಮುಂದೆ ತಮ್ಮ ಬೇಸರವನ್ನು ವ್ಯಕ್ತಪಡಿಸಿದರು ಆದರೂ ಕೂಡ ಇನ್ನು ಮುಂದಾದರು ನಮ್ಮ ಮನವಿಗೆ ಸ್ಪಂದಿಸಿ ರೈತರಿಗೆ ಅನುಕೂಲವಾಗುವಂತೆ ಕೆಲಸ ಮಾಡಿ ಎಂದು ಆಗ್ರ ಮಾಡಿದರು
ಮತ್ತು ಈಗಾಗಲೇ ಅತಿವೃಷ್ಟಿಯಿಂದ ಬೆಳೆಗಳು ಹಾಳಾಗಿರುವಂಥ ರೈತರಿಗೆ ಇನ್ನುವರೆಗೂ ಸುರಪುರ ತಾಲೂಕಿನ ರೈತರ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ವರದಿ ಸಲ್ಲಿಸು ಸಲ್ಲಿಸಿರುತ್ತಾರೆ. ಆದರೂ ಕೂಡ ಇನ್ನೊವರೆಗೂ ಪರಿಹಾರ ಜಮಾ ಆಗಿರುವುದಿಲ್ಲ ಆದ್ದರಿಂದ ಆದಷ್ಟು ಬೇಗನೆ ರೈತರಿಗೆ ಪರಿಹಾರ ಒದಗಿಸುವ ಕೆಲಸ ಮಾಡಬೇಕು ಎಂದು ಮಾನ್ಯ ತಹಸೀಲ್ದಾರರಿಗೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ವತಿಯಿಂದ ಮನವಿ ಸಲ್ಲಿಸಿದರು
